ADVERTISEMENT

‘ಸಪ್ಲಿಮೆಂಟರಿ‘ ಚಿತ್ರದ ಹಾಡುಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 20:10 IST
Last Updated 19 ಜನವರಿ 2019, 20:10 IST
’ಸಪ್ಲಿಮೆಂಟರಿ’ ಸಿನಿಮಾದ ಹಾಡುಗಳನ್ನು ಪ್ರೊ.ವೈ.ಎಸ್. ಸಿದ್ದೇಗೌಡ ಬಿಡುಗಡೆಗೊಳಿಸಿದರು. ನಿರ್ಮಾಪಕ ಮಹೇಂದ್ರ ಮನೋಟ್, ತುಮಕೂರು ವಿವಿಯ ಕುಲಸಚಿವ ಕೆ.ಎನ್.ಗಂಗಾನಾಯಕ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಜೆ.ಸುರೇಶ್, ಹಣಕಾಸು ಅಧಿಕಾರಿ ಪಿ.ಪರಮಶಿವಯ್ಯ, ಮೈಸೂರು ವಿಶ್ವವಿದ್ಯಾಲದ ಪ್ರಾಧ್ಯಾಪಕ ಪ್ರೊ.ಕೆಂಪರಾಜು ಇದ್ದಾರೆ.

ತುಮಕೂರು: ಪರಸ್ಪರ ಸಹಕಾರದಿಂದ ಕೆಲಸ ಮಾಡುವುದನ್ನು ಕಲಾವಿದರಿಂದ ಕಲಿಯಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್‌.ಸಿದ್ದೇಗೌಡ ಅಭಿಪ್ರಾಯಪಟ್ಟರು.

ವಿವಿಯ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ದೇವರಾಜು ಅವರ ನಿರ್ದೇಶನದ ‘ಸಂಪ್ಲಿಮೆಂಟರಿ’ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಸೋತ ವಿದ್ಯಾರ್ಥಿಗಳಿಗೆ ಆದರ್ಶ ಶಿಕ್ಷಕನಾಗಿ ಹೇಗೆ ಸಾಂತ್ವನ ಹೇಳಬಹುದು ಎಂಬುದನ್ನು ಈ ಚಿತ್ರದ ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವರ ಮೊದಲ ಚಿತ್ರವೇ ಉತ್ತಮವಾಗಿ ಮೂಡಿಬಂದಿದ್ದು ಪ್ರದರ್ಶನಗೊಂಡ ನಂತರ ಪ್ರಶಸ್ತಿ ಗಳಿಸುವುದು ಖಚಿತ ಎಂದು ಹೇಳಿದರು.

ADVERTISEMENT

ವಿವಿಯಲ್ಲಿ ವಿಶಿಷ್ಟ ಸಿಬ್ಬಂದಿ ಇರುವುದು ಶ್ಲಾಘನೀಯ. ಈ ಚಿತ್ರವು ಜ.25 ರಂದು ಬೆಳ್ಳಿತೆರೆಗೆ ಬರಲಿದ್ದು ಶತದಿನಗಳ ಕಾಲ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.

ದೇವರಾಜು ಮಾತನಾಡಿ, ‘ಸಿನಿಮಾ ಮತ್ತು ಜೀವನಕ್ಕೆ ಸಾಮ್ಯತೆ ಇದೆ. ನನ್ನ ಜೀವನದಲ್ಲಿ ಮೊದಲನೇ ಪ್ರಯತ್ನದಲ್ಲಿ ಯಶಸ್ಸು ಪಡೆಯುವಲ್ಲಿ ವಿಫಲನಾಗಿದ್ದು, ನಂತರ ಯಶಸ್ಸು ಕಂಡಿದ್ದೇನೆ. ಈ ನಿಟ್ಟಿನಲ್ಲಿ ನಿರ್ಮಿಸಿದ ಚಿತ್ರ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.