ADVERTISEMENT

ತುಮಕೂರು: ಬೆಳೆ ಹಾನಿಗೆ ವಾರದಲ್ಲಿ ಪರಿಹಾರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 4:18 IST
Last Updated 29 ನವೆಂಬರ್ 2021, 4:18 IST
ತುಮಕೂರು ಅರಳೇಪೇಟೆ ಬಸವೇಶ್ವರಸ್ವಾಮಿ ದೇಗುಲದಲ್ಲಿ ಭಾನುವಾರ ವಸತಿ ಸಚಿವ ವಿ.ಸೋಮಣ್ಣ ನಾಮಫಲಕ ಅನಾವರಣ ಮಾಡಿದರು. ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ಸೊಗಡು ಶಿವಣ್ಣ, ಎಸ್.ಜಿ.ಚಂದ್ರಮೌಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಅತ್ತಿ ರೇಣುಕಾನಂದ, ಮೋಹನ್‍ ಪಟೇಲ್, ಶಿವಕುಮಾರ್, ಕೊಪ್ಪಲ್ ನಾಗರಾಜು, ರವಿಶಂಕರ್, ಎನ್.ರುದ್ರಪ್ಪ ಇತರರು ಇದ್ದರು
ತುಮಕೂರು ಅರಳೇಪೇಟೆ ಬಸವೇಶ್ವರಸ್ವಾಮಿ ದೇಗುಲದಲ್ಲಿ ಭಾನುವಾರ ವಸತಿ ಸಚಿವ ವಿ.ಸೋಮಣ್ಣ ನಾಮಫಲಕ ಅನಾವರಣ ಮಾಡಿದರು. ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ಸೊಗಡು ಶಿವಣ್ಣ, ಎಸ್.ಜಿ.ಚಂದ್ರಮೌಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಅತ್ತಿ ರೇಣುಕಾನಂದ, ಮೋಹನ್‍ ಪಟೇಲ್, ಶಿವಕುಮಾರ್, ಕೊಪ್ಪಲ್ ನಾಗರಾಜು, ರವಿಶಂಕರ್, ಎನ್.ರುದ್ರಪ್ಪ ಇತರರು ಇದ್ದರು   

ತುಮಕೂರು: ಅಕಾಲಿಕ ಮಳೆಯಿಂದ ಹಾನಿಗೆ ತುತ್ತಾಗಿರುವ ಬೆಳೆ, ಮನೆಗೆ ಒಂದು ವಾರದಲ್ಲಿ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ನಗರದ ಅರಳೇಪೇಟೆ ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ಕುಂಭಾಭೀಷೇಕ ಮಹೋತ್ಸವದ ಅಂಗವಾಗಿ ನಡೆದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ, ಬ್ರಮರಾಂಭ ಅಮ್ಮನವರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾನುವಾರ ದೇಗುಲದ ಪ್ರಾರಂಭೋತ್ಸವದ ನಾಮಫಲಕ ಅನಾವರಣಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದಲ್ಲಿ ಕೋವಿಡ್ 3ನೇ ಅಲೆಯ ಸೂಚನೆ ಕಂಡು ಬರುತ್ತಿದ್ದು, ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ಕೆಲವು ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು
ಹೇಳಿದರು.

ADVERTISEMENT

ನಗರದ ಅರಳೇಪೇಟೆಯಲ್ಲಿ ನಿರ್ಮಿಸಿರುವ ದೇವಾಲಯ ಪುರಾತನ ಇತಿಹಾಸ ಹೊಂದಿದೆ. ಇದು ಕೇವಲ ಒಂದು ಸಮಾಜದ ದೇವಾಲಯವಲ್ಲ. ಎಲ್ಲ ವರ್ಗದವರ ದೇವಾಲಯ. ಜಾತ್ಯತೀತವಾದ ನಂಬಿಕೆ, ಧಾರ್ಮಿಕ ಭಾವನೆ ಉಳಿಸಿಕೊಂಡು ಬರುವ ಪವಿತ್ರವಾದ ಸ್ಥಳವಾಗಿದೆ ಎಂದರು.

ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ‘ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿದ್ದು, ಎಡೆಯೂರು ರೇಣುಕಾ ಶಿವಾಚಾರ್ಯ ಸ್ವಾಮೀಜಿ, ನೊಣವಿನಕೆರೆ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಾಗಡಿ ಜಂಗಮ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಎಸ್‍ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸವಪ್ಪ, ಜಿ.ಎಚ್.ಪರಮಶಿವಯ್ಯ ಸೇರಿದಂತೆ ಅನೇಕರು ಭಾಗವಹಿಸಿದ್ದರು’ ಎಂದು ತಿಳಿಸಿದರು.

ದೇವಾಲಯದ ಜೀರ್ಣೋದ್ಧಾರ ಮಹೋತ್ಸವಕ್ಕೆ ಆಗಮಿಸುತ್ತಿರುವ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದರು.

ನೂತನವಾಗಿಪ್ರತಿಷ್ಠಾಪಿಸಿರುವ ಕಳಸದ ಅಭಿಷೇಕಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡ ಸೊಗಡು ಶಿವಣ್ಣ, ನಗರ ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸಮಿತಿ ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್‍ ಪಟೇಲ್, ಶಿವಕುಮಾರ್, ಕೊಪ್ಪಲ್ ನಾಗರಾಜು, ರವಿಶಂಕರ್, ಎನ್.ರುದ್ರಪ್ಪ, ಕೆ.ಎಸ್.ನಾಗರಾಜು, ಯೋಗೀಶ್, ನಟರಾಜು, ಮಲ್ಲೇಶಯ್ಯ, ಕೆ.ಎಸ್.ವಿಶ್ವನಾಥ್, ನಾಗರಾಜು ಮೊದಲಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.