ADVERTISEMENT

ಯೋಧರ ಸ್ಮರಣೆ ನಮ್ಮ ಕರ್ತವ್ಯ: ಶಾಸಕ ಬಿ.ಸುರೇಶ್‌ಗೌಡ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 14:29 IST
Last Updated 14 ಜುಲೈ 2024, 14:29 IST
<div class="paragraphs"><p>ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಭಾನುವಾರ ಸಿಟಿಜನ್ಸ್‌ ಸೊಸೈಟಿ ಆಫ್‌ ಇಂಡಿಯಾ ಸಂಘಟನೆಯಿಂದ ಕಾರ್ಗಿಲ್‌ ಯುದ್ಧದ ರಜತ ಮಹೋತ್ಸವದ ಪ್ರಯುಕ್ತ ನೆನಪಿನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌ ಇತರರು ಉಪಸ್ಥಿತರಿದ್ದರು.</p></div>

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಭಾನುವಾರ ಸಿಟಿಜನ್ಸ್‌ ಸೊಸೈಟಿ ಆಫ್‌ ಇಂಡಿಯಾ ಸಂಘಟನೆಯಿಂದ ಕಾರ್ಗಿಲ್‌ ಯುದ್ಧದ ರಜತ ಮಹೋತ್ಸವದ ಪ್ರಯುಕ್ತ ನೆನಪಿನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌ ಇತರರು ಉಪಸ್ಥಿತರಿದ್ದರು.

   

ತುಮಕೂರು: ಪ್ರಾಣ ತ್ಯಾಗ ಮಾಡಿದ, ಯುದ್ಧದಲ್ಲಿ ಮಡಿದ ಯೋಧರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ಶಾಸಕ ಬಿ.ಸುರೇಶ್‌ಗೌಡ ಹೇಳಿದರು.

ನಗರದ ಸಿದ್ಧಗಂಗಾ ಮಠದಲ್ಲಿ ಭಾನುವಾರ ಸಿಟಿಜನ್ಸ್‌ ಸೊಸೈಟಿ ಆಫ್‌ ಇಂಡಿಯಾ ಸಂಘಟನೆಯು ಕಾರ್ಗಿಲ್‌ ಯುದ್ಧದ ರಜತ ಮಹೋತ್ಸವದ ನೆನಪಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

25 ವರ್ಷಗಳ ಹಿಂದೆ ನಡೆದ ಕಾರ್ಗಿಲ್‌ ಯುದ್ಧದಲ್ಲಿ ಭಾರತದ ಅನೇಕ ಯೋಧರು ತಮ್ಮ ಜೀವ ಪಣಕ್ಕಿಟ್ಟು ಹೋರಾಡಿದರು. ಅಂದಿನ ಯುದ್ಧದಲ್ಲಿ ಮಡಿದ ಯೋಧರನ್ನು ಎಲ್ಲರು ಸ್ಮರಿಸಬೇಕು. ಮಕ್ಕಳಿಗೆ ಬಾಲ್ಯದಲ್ಲೇ ದೇಶದ ರಕ್ಷಣೆಯ ಮಹತ್ವ ತಿಳಿಸುವ ಕೆಲಸವಾಗುತ್ತಿದೆ. ಸೈನಿಕರು, ರಾಷ್ಟ್ರದ ಬಗ್ಗೆ ತಿಳಿಹೇಳಬೇಕು ಎಂದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಸಂಘಟನೆಯ ರವಿ ಮುನಿಸ್ವಾಮಿ, ಪಿ.ವಿ.ಹರಿ, ಮಣಿಕಂಠನ್‌, ಎಸ್‌.ಸಿ.ಭಂಡಾರಿ, ಬಿ.ಪಿ.ಶಿವಕುಮಾರ್‌, ದಿನೇಶ್‌, ವಾಸುದೇವನ್‌, ಶೇಷಾದ್ರಿ, ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.