ADVERTISEMENT

ಶಿಥಿಲಗೊಂಡ ರಸ್ತೆಯಲ್ಲಿ ಸಂಚಾರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:07 IST
Last Updated 16 ಏಪ್ರಿಲ್ 2025, 14:07 IST
ಹುಳಿಯಾರು ಹೋಬಳಿಯ ನುಲೇನೂರು ಗ್ರಾಮವನ್ನು ದಸೂಡಿ ಮುಖ್ಯರಸ್ತೆಯಿಂದ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದೆ
ಹುಳಿಯಾರು ಹೋಬಳಿಯ ನುಲೇನೂರು ಗ್ರಾಮವನ್ನು ದಸೂಡಿ ಮುಖ್ಯರಸ್ತೆಯಿಂದ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದೆ   

ಹುಳಿಯಾರು: ಹೋಬಳಿಯ ನುಲೇನೂರು ಗ್ರಾಮವನ್ನು ದಸೂಡಿ ಮುಖ್ಯರಸ್ತೆಯಿಂದ ಸಂಪರ್ಕಿಸುವ ರಸ್ತೆ ಸಂಪೂರ್ಣ ಶಿಥಿಲಗೊಂಡಿದ್ದು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತುಮಕೂರು ಜಿಲ್ಲೆಯ ಗಡಿಭಾಗವೆಂದೇ ಗುರ್ತಿಸಲ್ಪಟ್ಟಿರುವ ನುಲೇನೂರು ಗ್ರಾಮದ ಸುತ್ತ ಗುಡ್ಡಗಳು ಸುತ್ತುವರೆದಿವೆ. ಗ್ರಾಮಕ್ಕೆ ಮೂಲ ಸೌಕರ್ಯಗಳು ಮರೀಚಿಕೆಯಾಗುತ್ತಿದೆ ಎಂಬ ಆರೋಪಗಳ ನಡುವೆ ಗ್ರಾಮಕ್ಕೆ ಸಂದಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ದಸೂಡಿ-ಸೋಮನಹಳ್ಳಿ ಗೇಟ್‌ ಮುಖ್ಯರಸ್ತೆಯಿಂದ ರಂಗನಗುಡ್ಡದ ಪಕ್ಕದ ಕಟ್ಟೆಯಿಂದ ಗ್ರಾಮಕ್ಕೆ ರಸ್ತೆಯಿದೆ. ಈ ರಸ್ತೆ ಇಂದಿಗೂ ಜಲ್ಲಿ ಕಂಡಿಲ್ಲ. ಎರಡು ವರ್ಷದ ಹಿಂದೆ ಗುತ್ತಿಗೆದಾರರೊಬ್ಬರು ಸುಮಾರು ಅರ್ಧ ಕಿ.ಮೀ ಕಳಪೆ ಕಾಮಗಾರಿ ಮಾಡಿದ್ದರು. ಗ್ರಾಮ ತಲುಪುವ ಉಳಿದ 2 ಕಿ.ಮೀ ಸಂಪೂರ್ಣ ಹಾಳಾಗಿದೆ. ಇದುವೆರೆಗೂ ಜಲ್ಲಿ ಕಾಣದ ಕಾರಣ ರಸ್ತೆಯಲ್ಲಿ  ಕಲ್ಲುಗಳು ತುಂಬಿ ಹೋಗಿದೆ ಎಂದರು.

ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳು ಸಂಚರಿಸಲು ಸಾಧ್ಯವಾಗುವುದಿಲ್ಲ. ಇದೇ ರಸ್ತೆಯಲ್ಲಿ ಗ್ರಾಮದ ಜನರು ತಮ್ಮ ಜಮೀನುಗಳಿಗೆ ಪ್ರತಿನಿತ್ಯ ಸಂಚರಿಸುತ್ತಾರೆ. ಅಲ್ಲದೆ ರಂಗನಗುಡ್ಡದ ಬಳಿಯ ಗೋಕಟ್ಟೆಯಿಂದ ನುಲೇನೂರು, ಕಲ್ಲೇನಹಳ್ಳಿ ಮಾರ್ಗವಾಗಿ ಹೆದ್ದಾರಿ ಭಾಗವಾಗಿರುವ ಶಿರಾ-ಹುಳಿಯಾರು ಮಧ್ಯೆ ಹೊಯ್ಸಳಕಟ್ಟೆ ಸೇರಲು ಹತ್ತಿರದ ಮಾರ್ಗವಾಗಿದೆ. ಈ ರಸ್ತೆ ಜಿಲ್ಲಾ ಪಂಚಾಯಿತಿಗೆ ಸೇರಿದ್ದು ಹಣ ವಿನಿಯೋಗಿಸಲು ನಮ್ಮಲ್ಲಿ ಹಣವಿಲ್ಲ ಎಂದು ಅಧಿಕಾರಿಗಳು ಕೈ ತೊಳೆದಿಕೊಳ್ಳುತ್ತಾರೆ. ಇತ್ತ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿ ಪಡಿಸಲು ಕಾನೂನು ತೊಡಕು ಎದುರಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಎರಡು ಇಲಾಖೆಗಳ ಮಧ್ಯೆ ಜನರು ಸಂಕಷ್ಟು ಎದುರಿಸುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ADVERTISEMENT

ಕೂಡಲೇ ಸ್ಥಳೀಯ ಶಾಸಕರು ಅನುದಾನ ನೀಡಿ ರಸ್ತೆ ಕಾಮಗಾರಿ ಮಾಡಲು ಅನುವು ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.