ADVERTISEMENT

ತುಮಕೂರು | ಭೋವಿ ಭವನಕ್ಕೆ ₹10 ಲಕ್ಷ: ಶಾಸಕ ಜ್ಯೋತಿಗಣೇಶ್

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 2:20 IST
Last Updated 29 ನವೆಂಬರ್ 2020, 2:20 IST
ತುಮಕೂರಿನಲ್ಲಿ ಶನಿವಾರ ಭೋವಿ ಸಮುದಾಯದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿ ಗಣೇಶ್ ಅವರನ್ನು ಸನ್ಮಾನಿಸಲಾಯಿತು
ತುಮಕೂರಿನಲ್ಲಿ ಶನಿವಾರ ಭೋವಿ ಸಮುದಾಯದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿ ಗಣೇಶ್ ಅವರನ್ನು ಸನ್ಮಾನಿಸಲಾಯಿತು   

ತುಮಕೂರು: ನಗರದಲ್ಲಿ ನಿರ್ಮಿಸಲಿರುವ ಭೋವಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದಡಿ ₹10 ಲಕ್ಷ ಅನುದಾನ ನೀಡುವುದಾಗಿ ಶಾಸಕ ಜ್ಯೋತಿಗಣೇಶ್ ತಿಳಿಸಿದರು.

ಭಾರತೀಯ ಭೋವಿ ಪರಿಷತ್ ವತಿಯಿಂದ ಪಾಲಿಕೆ ನಾಮಿನಿ ಸದಸ್ಯರಲ್ಲಿ ಭೋವಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಬಿ.ಎಚ್.ರಸ್ತೆಯಲ್ಲಿರುವ ನಿವೇಶನದಲ್ಲಿ ಸಮುದಾಯ ಭವನ, ಹಾಸ್ಟೆಲ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಳ್ಳಬೇಕು. ಶಿರಾ ಮದ್ದನಾಯಕನಹಳ್ಳಿ ಸಮಸ್ಯೆ ಬಗೆಹರಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಚುನಾವಣೆ ಕಾರಣಕ್ಕೆ ಭರವಸೆ ನೀಡಿಲ್ಲ. ಭರವಸೆಯನ್ನು ಈಡೇರಿಸುತ್ತಾರೆ ಎಂದರು.

ADVERTISEMENT

ಭಾರತೀಯ ಭೋವಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಡಾ.ಎಚ್.ರವಿ ಮಾಕಳಿ, ‘ಸಮುದಾಯದಲ್ಲಿರುವ ಸಂಘಟನೆ ಕೊರತೆಯಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದೇವೆ. ಸಮಾಜ ಇನ್ನಷ್ಟು ಸಂಘಟಿತರಾಗಬೇಕು ಎನ್ನುವ ಮನೋಭಾವನೆ ಎಲ್ಲರಲ್ಲಿಯೂ ಬಂದಿದೆ’ ಎಂದು ತಿಳಿಸಿದರು.

ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಆನಂದಪ್ಪ, ‘ಸಮುದಾಯದವರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಒಗ್ಗಟ್ಟಾಗದಿದ್ದರೆ ರಾಜಕೀಯ ಪ್ರಾತಿನಿಧ್ಯ ತಪ್ಪುತ್ತದೆ’ ಎಂದು ಹೇಳಿದರು.

ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಓಂಕಾರ್, ನಮ್ಮ ಜನಾಂಗಕ್ಕೆ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಕ್ಕಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಉಮೇಶ್, ಪರಿಷತ್ ದಕ್ಷಿಣ ಭಾರತದ ಅಧ್ಯಕ್ಷ ಜೈಶಂಕರ್, ಮುಖಂಡರಾದ ಆನಂದಪ್ಪ, ಡಾ.ಗಂಗಾಧರ್, ಶ್ರೀಧರ್, ಉಮೇಶ್, ಪುಟ್ಟರಾಜು, ವಿಶ್ವನಾಥ್, ಮಂಜುನಾಥ್, ವಿಷ್ಣು ವರ್ಧನ್, ಪಟೇಲ್ ನಾಗರಾಜು, ಶಿವಕುಮಾರ್, ಶ್ರೀನಿವಾಸ್, ರಾಮಾಂಜಿನಪ್ಪ, ಪರಮಶಿವಯ್ಯ ಉಪಸ್ಥಿತರಿದ್ದರು.

ಪದಾಧಿಕಾರಿಗಳು: ಇದೇ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷರನ್ನಾಗಿ ತಾ.ಪಂ ಸದಸ್ಯ ಶಿವಕುಮಾರ್, ಶಿರಾ ಗೋವಿಂದರಾಜು, ರಮೇಶ್, ಪಾಲಿಕೆ ಸದಸ್ಯ ವಿಶ್ವನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿಯಾಗಿ ಗೋಪಿನಾಥ್, ವೆಂಕಟೇಶ್, ಸಂಘಟನಾ ಕಾರ್ಯದರ್ಶಿಯಾಗಿ ಕಾಶೀನಾಥ್, ಖಜಾಂಚಿಯಾಗಿ ತ್ರಿಲೋಚನ್, ತುಮಕೂರು ನಗರದ ಅಧ್ಯಕ್ಷರಾಗಿ ಪುರುಷೋತ್ತಮ್, ನಗರ ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ರಂಗಸ್ವಾಮಿ, ಗ್ರಾಮಾಂತರ ಅಧ್ಯಕ್ಷರಾಗಿ ರಾಜ್‌ಕುಮಾರ್, ಶಿರಾ ತಾಲ್ಲೂಕು ಅಧ್ಯಕ್ಷರಾಗಿ ತಿಮ್ಮರಾಜು ಅವರನ್ನು ನೇಮಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.