ADVERTISEMENT

ವಿಶ್ವಕ್ಕೆ ಮಾದರಿ ಸಿದ್ಧಗಂಗಾ ಶ್ರೀ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 15:17 IST
Last Updated 31 ಜನವರಿ 2019, 15:17 IST
ಆರ್ಯ ಭಾರತೀ ಪಾಲಿಟೆಕ್ನಿಕ್‌ನಲ್ಲಿ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪುಷ್ಪನಮನ ಸಲ್ಲಿಸಿದರು
ಆರ್ಯ ಭಾರತೀ ಪಾಲಿಟೆಕ್ನಿಕ್‌ನಲ್ಲಿ ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪುಷ್ಪನಮನ ಸಲ್ಲಿಸಿದರು   

ತುಮಕೂರು: ಹಸಿದ ಹೊಟ್ಟೆಗೆ ಅನ್ನ ನೀಡುವುದರೊಂದಿಗೆ ಜ್ಞಾನ ಮತ್ತು ವಸತಿಯನ್ನು ಸಾವಿರಾರು ವಿದ್ಯಾರ್ಥಿಗಳಿಗೆ ನಿತ್ಯವೂ ನೀಡಿದ ಶ್ರೀಗಳು ಅನರ್ಘ್ಯ ರತ್ನ, ಇಡೀ ವಿಶ್ವಕ್ಕೆ ಮಾದರಿ ಎಂದು ಪಾಲಿಟೆಕ್ನಿಕ್‌ನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಆರ್.ಎನ್.ಸತ್ಯನಾರಾಯಣ ಆಶಯವ್ಯಕ್ತಪಡಿಸಿದರು.

ನಗರದ ಆರ್ಯಭಾರತಿ ಪಾಲಿಟೆಕ್ನಿಕ್‌ನಿಂದ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪ್ರಾಂಶುಪಾಲ ಕೆ.ಆರ್.ಅಶೋಕ ಮಾತನಾಡಿ, ‘ಕಾಯಕವೇ ಕೈಲಾಸ ಎಂದು ಬಲವಾಗಿ ನಂಬಿದ್ದ ಪರಮಪೂಜ್ಯರು, ಎಲ್ಲರಿಗೂ ಸ್ಫೂರ್ತಿಯ ಶಕ್ತಿಯಾಗಿರುತ್ತಾರೆ’ ಎಂದರು.

ADVERTISEMENT

ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕ ವೃಂದದವರು, ಪಾಲಿಟೆಕ್ನಿಕ್‌ನ ವಿವಿಧ ವಿಭಾಗಗಳ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಒಂದು ನಿಮಿಷದ ಮೌನಾಚರಣೆಯ ಮೂಲಕ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.