ADVERTISEMENT

ಶ್ರೀಗಂಧ ಕಳವು; ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:49 IST
Last Updated 1 ಅಕ್ಟೋಬರ್ 2020, 8:49 IST

ಪಾವಗಡ: ತಾಲ್ಲೂಕಿನ ಹುಸೇನ್‌ಪುರ ಬಳಿ ಶ್ರೀಗಂಧದ ತುಂಡುಗಳನ್ನು ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ತಿರುಮಣಿ ಪೊಲೀಸರು ಬಂಧಿಸಿ ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆಂಧ್ರ ಪ್ರದೇಶದ ರೊದ್ದಂ ಮಂಡಲಂ ಕೋಗೀರಾ ಗ್ರಾಮದ ನರಸಿಂಹುಲು(35), ಗೋಪಾಲ(50) ಬಂಧಿತರು.

ಹುಸೇನ್‌ಪುರ ಬಳಿಯ ಅನ್ನದಾನಪುರ-ತಿರುಮಣಿ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಚೀಲ ಕೊಂಡೊಯ್ಯುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. 6 ಗಂಧದ ಮರದ ತುಂಡುಗಳು ಸಿಕ್ಕಿವೆ. ಅಕ್ರಮವಾಗಿ ಗಂಧ ಸಾಗಣೆ ಮಾಡುತ್ತಿದ್ದ ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆ ಕಲಂ 86, ಐ.ಪಿ.ಸಿ 379 ರ ಅಡಿ ಪ್ರಕರಣ ದಾಖಲಿಸಲಾಗಿದೆ.

ADVERTISEMENT

ಆರೋಪಿಗಳು ಮತ್ತು ಗಂಧವನ್ನು ಪತ್ತೆ ಹಚ್ಚಲು ಶ್ರಮಿಸಿದ ಸರ್ಕಲ್ ಇನ್ ಸ್ಪೆಕ್ಟರ್ ಸಿ.ವೆಂಕಟೇಶ್, ಸಬ್ ಇನ್ ಸ್ಪೆಕ್ಟರ್ ಗುರುನಾಥ್, ಸಿಬ್ಬಂದಿ ಸತೀಶ್, ಪುಂಡಲೀಕ ಲಮಾಣಿ, ಪ್ರವೀಣ ಭಜಂತ್ರಿ, ದಾವಲಸಾಬ ಬಾ್ವಾನ, ಪುಂಡಲೀಕ ಕೂಗಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.