ADVERTISEMENT

ವಕ್ಫ್ ಆಡಳಿತ ಮಂಡಳಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 5:42 IST
Last Updated 26 ಜನವರಿ 2021, 5:42 IST

ತುಮಕೂರು: ಇಲ್ಲಿನ ಹಜತ್ ಮದಾರ್ ಮಖಾನ್ (ವಕ್ಫ್) ಸಂಸ್ಥೆಯ ವ್ಯವಸ್ಥಾಪಕ ಸಮಿತಿಯ ಚುನಾವಣೆ ಇತ್ತೀಚೆಗೆ ನಡೆಯಿತು.

15 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಿತು.

ಒಟ್ಟು 80 ಮಂದಿ ಸ್ಪರ್ಧಿಗಳು ಕಣದಲ್ಲಿದ್ದರು. ಒಟ್ಟು 3,149 ನೋಂದಾಯಿತ ಮತದಾರರಿದ್ದು 2,860 ಮಂದಿ
ಮತ ಚಲಾಯಿಸಿದರು.

ADVERTISEMENT

ಮುಕ್ತಿಯಾರ್ ಅಹಮ್ಮದ್, ಟಿ.ಎಸ್. ಗೌಸ್‌ಪಾಷಾ ಶಾಯಕ್, ಮುದಾಸಿರ್ ಅಹಮ್ಮದ್, ಮಹಮ್ಮದ್ ಇಸ್ಮಾಯಿಲ್, ಶಬ್ಬೀರ್ ಅಹಮ್ಮದ್, ಝುಬೇರ್, ಅಹಮ್ಮದ್, ಅಪ್ಸರ್ ಖಾನ್, ನಾಸಿರ್ ಖಾನ್, ನಸೀರ್ ಅಹಮ್ಮದ್, ಮುಬಾರಕ್ ಅಹಮ್ಮದ್, ಸೈಯದ್ ಮೆಹಬೂಬ್ ಪಾಷಾ, ಇಮ್ರಾನ್ ಪಾಷಾ, ಮಹಮ್ಮದ್ ರಫೀಕ್, ಅಬೀಬುಲ್ಲಾ ಖಾನ್, ಮಹಮ್ಮದ್ ಜಹೀದ್ ಜಮೀಲ್ ಚುನಾಯಿತರಾದರು.

ವಕ್ಫ್ ಸಮಿತಿ ವ್ಯಾಪ್ತಿಗೆ ಒಂದು ಐಟಿಐ ಕಾಲೇಜು, ಮಸೀದಿ, ಶಾದಿಮಹಲ್, ದರ್ಗಾ, ವಾಣಿಜ್ಯ ಸಂಕೀರ್ಣ, 14 ಎಕರೆ ಖಾಲಿ ಜಾಗ, 2 ಆಂಬುಲೆನ್ಸ್‌ಗಳು ಸೇರಿವೆ.

ವಾರ್ಷಿಕ ₹ 2.8 ಕೋಟಿ ಆದಾಯ ಬರುತ್ತದೆ. ಇವುಗಳ ನಿರ್ವಹಣೆಗಾಗಿಯೇ ವಕ್ಫ್ ಸಮಿತಿ ನೇಮಕ
ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.