ADVERTISEMENT

ಜಾಲಿಕಾಯಿ ತಿಂದು 17 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 14:30 IST
Last Updated 6 ಮಾರ್ಚ್ 2020, 14:30 IST
ಕೊರಟಗೆರೆ ತಾಲ್ಲೂಕಿನ ದೊಡ್ಡನರಸಯ್ಯನಪಾಳ್ಯದಲ್ಲಿ ಜಾಲಿಕಾಯಿ ತಿಂದು ಮೃತಪಟ್ಟ ಕುರಿಗಳು 
ಕೊರಟಗೆರೆ ತಾಲ್ಲೂಕಿನ ದೊಡ್ಡನರಸಯ್ಯನಪಾಳ್ಯದಲ್ಲಿ ಜಾಲಿಕಾಯಿ ತಿಂದು ಮೃತಪಟ್ಟ ಕುರಿಗಳು    

ಕೊರಟಗೆರೆ: ತಾಲ್ಲೂಕಿನ ದೊಡ್ಡನರಸಯ್ಯನಪಾಳ್ಯ ಗ್ರಾಮದಲ್ಲಿ ಜಾಲಿಕಾಯಿ ತಿಂದು 17 ಕುರಿಗಳು ಸ್ಥಳದಲ್ಲೆ ಮೃತಪಟ್ಟಿವೆ.

ದೊಡ್ಡನರಸಯ್ಯನಪಾಳ್ಯದ ವೀರಭದ್ರಪ್ಪ ಎಂಬುವರಿಗೆ ಸೇರಿದ 10 ಕುರಿ, ನರಸಿಂಹಯ್ಯ ಎಂಬುವರ 5 ಕುರಿ ಹಾಗೂ ಕೆಂಪರಾಮಯ್ಯ ಅವರ 2 ಕುರಿ ಮೃತಪಟ್ಟಿವೆ.

ಜಾಲಿ ಕಾಯಿ ತಿಂದ ನಂತರ ಅಸ್ವಸ್ಥಗೊಂಡಿದ್ದ ಹಲವು ಕುರಿಗಳಿಗೆ ಪಶು ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಬಿಸಿಲಿನಲ್ಲಿ ಜಾಲಿಕಾಯಿ ತಿಂದು ನೀರು ಕುಡಿದ ನಂತರ ಸಾವನ್ನಪ್ಪಿವೆ ಎಂದು ಕುರಿ ಮಾಲೀಕರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.