ADVERTISEMENT

ತುಮಕೂರು ನಗರದ ಶೆಟ್ಟಿಹಳ್ಳಿ ಕೆಳ ಸೇತುವೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 4:33 IST
Last Updated 28 ಫೆಬ್ರುವರಿ 2026, 4:33 IST
ತುಮಕೂರಿನ ಶೆಟ್ಟಿಹಳ್ಳಿ ಬಳಿ ರೈಲ್ವೆ ಕೆಳ ಸೇತುವೆಗೆ ಶುಕ್ರವಾರ ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿ, ಪರಿಶೀಲನೆ ನಡೆಸಿದರು
ತುಮಕೂರಿನ ಶೆಟ್ಟಿಹಳ್ಳಿ ಬಳಿ ರೈಲ್ವೆ ಕೆಳ ಸೇತುವೆಗೆ ಶುಕ್ರವಾರ ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ ನೀಡಿ, ಪರಿಶೀಲನೆ ನಡೆಸಿದರು   

ತುಮಕೂರು: ನಗರದ ಶೆಟ್ಟಿಹಳ್ಳಿ ಬಳಿ ರೈಲ್ವೆ ಕೆಳ ಸೇತುವೆಗೆ ಕೇಂದ್ರ ಜಲ ಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶುಕ್ರವಾರ ಚಾಲನೆ ನೀಡಿದರು.

‘ತುಮಕೂರು ಮತ್ತು ದಾವಣಗೆರೆ ರೈಲ್ವೆ ಕಾಮಗಾರಿ ಎರಡು ಹಂತದಲ್ಲಿ ನಡೆಯುತ್ತಿದೆ. ಸುಮಾರು ವರ್ಷಗಳಿಂದ ಕೆಲಸ ವೇಗ ಪಡೆದಿರಲಿಲ್ಲ. ಈಗ ಸುಮಾರು 4 ಸಾವಿರ ಎಕರೆ ಜಾಗ ತೆಗೆದುಕೊಂಡು ಕಾಮಗಾರಿ ಪೂರ್ಣಗೊಳಿಸಿದ್ದೇವೆ. ಮಲ್ಲಸಂದ್ರ ಕೆಳ ಸೇತುವೆ ಕಾಮಗಾರಿ ನವೆಂಬರ್‌ನಲ್ಲಿ ಮುಗಿಯಲಿದೆ’ ಎಂದು ತಿಳಿಸಿದರು.

ಹೆಗ್ಗೆರೆ ಬಳಿಯ ಮೇಲ್ಸೇತುವೆ, ಭೀಮಸಂದ್ರ ಬಳಿ ಪಾದಚಾರಿ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಟವಾಡಿ, ಬಡ್ಡಿಹಳ್ಳಿ, ಮೈದಾಳ, ಪಂಡಿತನಹಳ್ಳಿ ಬಳಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಪರಿಶೀಲಿಸಿದರು.

ADVERTISEMENT

ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌.ರವಿಶಂಕರ್‌ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.