ADVERTISEMENT

ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆಗೆ ಭಕ್ತರಿಂದ ದವಸ ಧಾನ್ಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 9:06 IST
Last Updated 29 ಜನವರಿ 2019, 9:06 IST
ಮಠದಲ್ಲಿ ಜಹಂಗೀರ್ ತಯಾರಿಸಿರುವುದು.
ಮಠದಲ್ಲಿ ಜಹಂಗೀರ್ ತಯಾರಿಸಿರುವುದು.    

ತುಮಕೂರು: ಬರುವ ಜನವರಿ 31ರಂದು ನಡೆಯಲಿರುವ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆಗಾಗಿ ನಾನಾ ಕಡೆಗಳಿಂದ ಭಕ್ತರು ದವಸ, ಧಾನ್ಯಗಳು ಹಾಗೂ ಅಡುಗೆ ಸಾಮಗ್ರಿಗಳನ್ನು ಮಠಕ್ಕೆ ನೀಡುತ್ತಿದ್ದಾರೆ.

ಈಗಾಗಲೇ ಮಠದ 7 ಕಡೆ ಅಡುಗೆ ತಯಾರಿ ನಡೆಯುತ್ತಿದೆ. ಸೋಮವಾರ ಮಾಜಿ ಶಾಸಕ ಬಿ.ಸುರೇಶಗೌಡ 100 ಕ್ವಿಂಟಲ್ ಅಕ್ಕಿ ನೀಡಿದರು.

ಭಕ್ತರು ಧವಸ ದಾನ್ಯಗಳನ್ನು ಲಾರಿಗಳಲ್ಲಿ ಕಳುಹಿಸಿರುವುದು

ಮಂಗಳವಾರ ಶಾಸಕ ಡಿ.ಸಿ.ಗೌರಿಶಂಕರ್ ಒಂದು ಲಾರಿ ಲೋಡ್ ಅಕ್ಕಿ ನೀಡಿದರು. ಚಿತ್ರದುರ್ಗದ ಎಪಿಎಂಸಿ ವರ್ತಕರು ಹಾಗೂ ಭಕ್ತರು 250 ಕ್ವಿಂಟಲ್ ಅಕ್ಕಿ,‌ ಕಡಲೆಬೇಳೆ ಸಕ್ಕರೆ ನೀಡಿದರು. ಭಕ್ತರು ತಮ್ಮ ಶಕ್ತಾನುಸಾರ ದವಸ ಧಾನ್ಯಗಳನ್ನು ಮಠಕ್ಕೆ ತರುತ್ತಿದ್ದಾರೆ.

ADVERTISEMENT

ಈಗಾಗಲೇ ಎರಡು ಲಕ್ಷ ಜಹಂಗೀರ್ ಸಿದ್ಧವಾಗಿದ್ದು, ಬೂಂದಿ, ಮಾಲ್ದಿಯನ್ನು ತಯಾರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.