
ಪ್ರಜಾವಾಣಿ ವಾರ್ತೆ
ತುಮಕೂರು: ದಾಸೋಹಕ್ಕೆ ಮತ್ತೊಂದು ಹೆಸರು ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ.ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ಈಚೆಗೆ ಶರಣ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಸಂಸ್ಮರಣೆ, ಆನಂದ್ ಪ್ರಕಾಶ್ ಅವರ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮೀಜಿ ತಮ್ಮ ಬದುಕನ್ನು ಬಡ ಮಕ್ಕಳಿಗಾಗಿ ಮೀಸಲಿಟ್ಟಿದ್ದರು. ಅನ್ನ, ಆಶ್ರಯ, ವಿದ್ಯೆ ನೀಡಿ ಅವರ ಬದುಕು ರೂಪಿಸಿದರು ಎಂದರು.
ಸೋಮವಾರಪೇಟೆಯ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಬಿ.ಪಿ.ಶಿವಕುಮಾರ್, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಭವಾನಮ್ಮ ಗುರುಮಲ್ಲಪ್ಪ, ಮಿಮಿಕ್ರಿ ಈಶ್ವರಯ್ಯ, ಬಿ.ರಾಜಶೇಖರಯ್ಯ, ನರೇಂದ್ರ ಶರ್ಮಾ, ಶುಭಾ ನಾಗರಾಜು, ದಾನಶೆಟ್ಟಿ, ಗೀತಾ ದಾನಶೆಟ್ಟಿ, ಎಸ್.ಪಿ.ರವೀಂದ್ರನಾಥ ಠಾಗೂರ್, ಶಿವಲಿಂಗಮ್ಮ, ವೈ.ಬಿ.ಮಹದೇವ್ ಇತರರು ಹಾಜರಿದ್ದರು.