ADVERTISEMENT

ರಾಷ್ಟ್ರ ನಿರ್ಮಾಣಕ್ಕೆ ಶ್ರೀಗಳ ಅಗಣಿತ ಸೇವೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 10:25 IST
Last Updated 29 ಜನವರಿ 2019, 10:25 IST
ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ಡಾ.ನಂಜುಂಡ ಸ್ವಾಮಿ ಹಾಗೂ ಮಠದ ವಿದ್ಯಾರ್ಥಿಗಳಾದ ಶಿವು ಮತ್ತು ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಅನನ್ಯ ಸಂಸ್ಥೆಯ ಅಧ್ಯಕ್ಷ ಸಿ.ಎ.ಎಸ್.ವಿಶ್ವನಾಥ್‌, ಕಾರ್ಯದರ್ಶಿ ಪ್ರೊ.ಚೆನ್ನಬಸವ ಪ್ರಸಾದ್, ಟ್ರಸ್ಟಿ ಎಚ್.ಹರೀಶ್, ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್.ಉಮೇಶ್, ಪ್ರಾಂಶುಪಾಲ ಡಾ.ಎಂ.ವಿಶ್ವಾಸ್ ಇದ್ದಾರೆ

ತುಮಕೂರು: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರ ಕಾರ್ಯಗಳಿಂದ ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಅಗಣಿತ ಸೇವೆ ಸಲ್ಲಿಸಿದ್ದಾರೆ ಎಂದು ಆಯುರ್ವೇದ ವೈದ್ಯ ಡಾ.ನಂಜುಂಡ ಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಅನನ್ಯ ಇನ್‌ಸ್ಟಿಟ್ಯೂಟ್‌ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ನಡೆದ ಶಿವಕುಮಾರ ಸ್ವಾಮಿಗಳ ನುಡಿ ನಮನ ಮತ್ತು ಭಕ್ತಿ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜಿನ ನಿರ್ದೇಶಕ ಪ್ರೊ.ಬಿ.ಎಸ್.ಲಿಂಗರಾಜ್‌ ಮಾತನಾಡಿ, ‘ಸಮಾಜ ಸೇವೆಯೇ ಶ್ರೀಗಳನ್ನು ದೇವರನ್ನಾಗಿಸಿತ್ತು. ಅದರಲ್ಲಿಯೇ ಆತ್ಮೋನ್ನತಿ ಕಂಡ ಮಹಾನ್ ಸಂತರಾಗಿ ಪರಮಾತ್ಮನ ಸ್ಥಾನವನ್ನು ಪಡೆದು, ನಮ್ಮೆದುರಿನ ಶ್ರೇಷ್ಠ ಜೀವನ ಮಾದರಿಯಾಗಿದ್ದರು’ ಎಂದರು.

ADVERTISEMENT

ಡಾ.ಶಿವಕುಮಾರ ಸ್ವಾಮಿಗಳ ಜೀವನ ಚರಿತ್ರೆಯನ್ನು ಒಳಗೊಂಡ ಕಿರುನಾಟಕವನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.