ADVERTISEMENT

ಶಿರಾ: ವೀರ ಬೊಮ್ಮಣ್ಣ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 14:17 IST
Last Updated 11 ಏಪ್ರಿಲ್ 2025, 14:17 IST
ಶಿರಾ ತಾಲ್ಲೂಕಿನ ವೀರಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ನಂಜಾವಧೂತ ಸ್ವಾಮೀಜಿ ಮಾತನಾಡಿದರು
ಶಿರಾ ತಾಲ್ಲೂಕಿನ ವೀರಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ನಂಜಾವಧೂತ ಸ್ವಾಮೀಜಿ ಮಾತನಾಡಿದರು   

ಶಿರಾ: ‘ವೀರ ಸಾಂಸ್ಕೃತಿಕ ಪರಂಪರೆ ಉಳ್ಳ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ದೈವಿಕ ಶಕ್ತಿ ಹೊಂದಿದ ವೀರ. ಅಳುನವರ ಅಣ್ಣತಮ್ಮಂದಿರು, ಬಂಡಿಕಾರರು, ಭಕ್ತರರೆಲ್ಲರೂ ಒಗ್ಗೂಡಿ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿಗೆ ಭವ್ಯ ದೇಗುಲ ನಿರ್ಮಾಣ ಮಾಡುತ್ತಿರುವುದು ಹರ್ಷ ತಂದಿದೆ’ ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ವೀರಬೊಮ್ಮನಹಳ್ಳಿ ಗ್ರಾಮದಲ್ಲಿ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಗುರುವಾರ ರಾತ್ರಿ ನಡೆದ ರಥೋತ್ಸವದಲ್ಲಿ ಮಾತನಾಡಿದರು. ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ದೇಗುಲ ರಾಜ್ಯದಲ್ಲಿಯೇ ಮಾದರಿಯಾಗುವ ರೀತಿ ನಿರ್ಮಾಣವಾಗಿ ದೈವಿಕ ಶಕ್ತಿಯ ಕೇಂದ್ರವಾಗಲಿ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ನಾಡಿನ ಧಾರ್ಮಿಕ ಪರಂಪರೆ ಉಳಿಸಿ ಬೆಳೆಸುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡಬೇಕಿದೆ ಎಂದರು.

ADVERTISEMENT

ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಆರ್.ಉಗ್ರೇಶ್ ಮಾತನಾಡಿದರು. ಜಿ.ಪಂ ಮಾಜಿ ಸದಸ್ಯ ಎಸ್.ರಾಮಕೃಷ್ಣ, ಲಿಂಗದಹಳ್ಳಿ ಚೇತನ್ ಕುಮಾರ್, ರಾಮೇಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಎಚ್.ಗಂಗಾಧರಯ್ಯ, ನಾಗರಾಜು, ಪೂಜಾರ್ ಜಗದೀಶ್, ಪೂಜಾರ್ ಗಂಗಾಧರ್, ನಾಗರಾಜು, ರಂಗನಾಥ್, ಪುಟ್ಟ ಲಿಂಗಪ್ಪ, ನಾಗಭೂಷಣ, ಹನುಮಂತರಾಯಪ್ಪ ವೆಂಕಟೇಶ್, ಮಹದೇವಪ್ಪ, ಪ್ರಕಾಶ್ ರಾಜು ಪಾಲ್ಗೊಂಡಿದ್ದರು.

ಶಿರಾ ತಾಲ್ಲೂಕಿನ ವೀರಬೊಮ್ಮನಹಳ್ಳಿ ಗ್ರಾಮದಲ್ಲಿ ದಿಬ್ಬದ ವೀರ ಬೊಮ್ಮಣ್ಣ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ನಂಜಾವಧೂತ ಸ್ವಾಮೀಜಿ ಭಾಗವಹಿಸಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.