ADVERTISEMENT

ತುಮಕೂರು | 10 ಮಂದಿಗೆ ರಾಜ್ಯ ಗ್ರಂಥಪಾಲಕ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 3:23 IST
Last Updated 13 ಆಗಸ್ಟ್ 2024, 3:23 IST
ತುಮಕೂರಿನಲ್ಲಿ ಸೋಮವಾರ ನಡೆದ ಉತ್ತಮ ಗ್ರಂಥಪಾಲಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರೊಂದಿಗೆ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕರಾದ ದಿವಾಕರ, ಎನ್.ಸರಸ್ವತಿ, ಇಲಾಖೆಯ ಆಯುಕ್ತೆ ಎಂ.ಕನಗವಲ್ಲಿ, ಶಾಲಾ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ವಿ.ವಿ ಪ್ರಾಧ್ಯಾಪಕ ಕೇಶವ.

ತುಮಕೂರು: ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಂಥಾಲಯ ಇಲಾಖೆಯ ಹತ್ತು ನೌಕರರು ಮತ್ತು ಅಧಿಕಾರಿಗಳಿಗೆ ನಗರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರಾಜ್ಯ ಮಟ್ಟದ ಉತ್ತಮ ಗ್ರಂಥಪಾಲಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಗ್ರಂಥಾಲಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತರು: ಬಿ.ಕೆ.ಲಕ್ಷ್ಮಿಕಿರಣ್‌ (ಮುಖ್ಯ ಗ್ರಂಥಾಲಯಾಧಿಕಾರಿ, ಬಳ್ಳಾರಿ ಕೇಂದ್ರ ಗ್ರಂಥಾಲಯ), ಗ್ರಂಥಪಾಲಕರು: ಎಚ್‌.ಡಿ.ಬಸವರಾಜು (ತುಮಕೂರು ಕೇಂದ್ರ ಗ್ರಂಥಾಲಯ), ಬಿ.ನಮಿತಾ (ಉಡುಪಿ ಕೇಂದ್ರ ಗ್ರಂಥಾಲಯ).

ADVERTISEMENT

ಗ್ರಂಥಾಲಯ ಸಹಾಯಕರು: ಎಲ್‌.ಲಕ್ಷ್ಮಿಕಾಂತ (ಕೇಂದ್ರ ಗ್ರಂಥಾಲಯ, ಬೆಂಗಳೂರು ಉತ್ತರ ವಲಯ), ಎಸ್‌.ಎನ್‌.ಹೇಮಾವತಿ (ಕೇಂದ್ರ ಗ್ರಂಥಾಲಯ, ಕೋಲಾರ), ಎಂ.ಬಿ.ಲೋಕೇಶ್‌ (ಕೇಂದ್ರ ಗ್ರಂಥಾಲಯ, ಬೆಂಗಳೂರು ದಕ್ಷಿಣ ವಲಯ), ಪಿ.ಜಲಜ (ಬೆಂಗಳೂರು ಪಶ್ಚಿಮ ವಲಯ), ಆರ್‌.ಮಂಜುನಾಥ್‌ (ದೇವನಹಳ್ಳಿ ಶಾಖಾ ಗ್ರಂಥಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ), ಪರಮೇಶ್‌ (ಎಚ್‌.ಡಿ.ಕೋಟೆ ಶಾಖಾ ಗ್ರಂಥಾಲಯ, ಮೈಸೂರು), ಕುಸುಮಾವತಿ (ಮೇಲ್ವಿಚಾರಕಿ, ಕೇಂದ್ರ ಗ್ರಂಥಾಲಯ, ಬೆಂಗಳೂರು ಪಶ್ಚಿಮ ವಲಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.