ADVERTISEMENT

ಆರ್ಥಿಕ ಸದೃಢಕ್ಕೆ ದಾಪುಗಾಲು

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 16:52 IST
Last Updated 5 ಜನವರಿ 2019, 16:52 IST
ಸಂಪನ್ಮೂಲ ವ್ಯಕ್ತಿಗಳಾದ ಎಚ್.ಆರ್.ಪ್ರಭಾಕರ್ ಹಾಗೂ ವಿನೋದ ಪ್ರಭಾಕರ್‌ ಅವರನ್ನು ಸನ್ಮಾನಿಸಲಾಯಿತು
ಸಂಪನ್ಮೂಲ ವ್ಯಕ್ತಿಗಳಾದ ಎಚ್.ಆರ್.ಪ್ರಭಾಕರ್ ಹಾಗೂ ವಿನೋದ ಪ್ರಭಾಕರ್‌ ಅವರನ್ನು ಸನ್ಮಾನಿಸಲಾಯಿತು   

ತುಮಕೂರು:ಜಿಎಸ್‌ಟಿ ಒಂದು ಏಕರೂಪ ತೆರಿಗೆಯಾಗಿದ್ದು, ಭಾರತದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಚಂದನ ವಾಹಿನಿಯ ನಿರೂಪಕ ಎಚ್.ಆರ್.ಪ್ರಭಾಕರ್‌ ತಿಳಿಸಿದರು.

ನಗರದ ಅನನ್ಯ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಂದು ದಿನದ ಜಿಎಸ್‌ಟಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಿಎಸ್‌ಟಿಯಿಂದ ಪ್ರಸ್ತುತ ಭಾರತದ ಆರ್ಥಿಕತೆಗೆ ಆಗುತ್ತಿರುವ ಲಾಭಗಳು, ವಾಣಿಜ್ಯ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಠಿ, ಇಂಡಿಯಾ ಡಿಜಿಟಲೈಷನ್‌ ಕುರಿತು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದರು.

ADVERTISEMENT

ಸಂಸ್ಥೆಯ ಟ್ರಸ್ಟಿ ಎಚ್.ಹರೀಶ್, ಪ್ರಾಂಶುಪಾಲ ಎಂ.ವಿಶ್ವಾಸ್, ಅಧ್ಯಾಪಕರಾದ ಗಣೇಶ್‌ಪ್ರಸಾದ್, ದೇವಕಿ ಪ್ರಸಾದ್, ಕಾಂತರಾಜು, ಯಶ್ವಸಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.