ಬಂಧನ
ಕುಣಿಗಲ್: ತಾಲ್ಲೂಕಿನ ಕಲ್ಲುಪಾಳ್ಯದ ಗೃಹಿಣಿ ವೀಣಾ ಆತ್ಮಹತ್ಯೆ ಮಾಡಿಕೊಂಡಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ವೀಣಾ ಅವರ ಪತಿ ವಕೀಲ ನಾಗರಾಜುನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ವೀಣಾ (23) ಅವರ ತಂದೆ ಗಿಡದಪಾಳ್ಯದ ಶ್ರೀನಿವಾಸ ಗೌಡ ನೀಡಿರುವ ದೂರಿನಲ್ಲಿ, ‘ಮಗಳು ನಾಲ್ಕು ವರ್ಷದ ಹಿಂದೆ ಕಲ್ಲುಪಾಳ್ಯದ ಸಿದ್ದಪ್ಪ ಅವರ ಮಗ ವಕೀಲ ನಾಗರಾಜು ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಒಂದು ಗಂಡು ಮಗುವಿದೆ. ಮೊದಲು ಕುಣಿಗಲ್‌ನಲ್ಲಿ ವಾಸವಿದ್ದು, ಇತ್ತೀಚೆಗೆ ಕಲ್ಲುಪಾಳ್ಯದ ನಾಗರಾಜು ಮನೆಯಲ್ಲಿ ನೆಲೆಸಿದ್ದರು.
‘ಪತಿ ನೀಡುತ್ತಿದ್ದ ಮಾನಸಿಕ ಮತ್ತು ದೈಹಿಕ ಕಿರುಕುಳದಿಂದ ಬೇಸತ್ತು ಪೋಷಕರಿಗೆ ವಿಷಯ ತಿಳಿಸಿದಾಗ ರಾಜಿ ಮಾಡಲಾಗಿತ್ತು. 21ರಂದು ವೀಣಾ ಅವರ ಗಂಡ ನಾಗರಾಜು ನೇಣು ಬಿಗಿದು ಸಾಯಿಸಿ, ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಮಗಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಸಾಯಿಸಿದ್ದಾರೆ. ಅಳಿಯ ಮತ್ತು ಕುಟುಂಬಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪೋಷಕರು ದೂರಿನಲ್ಲಿ ಮನವಿ ಮಾಡಿದ್ದರು.
ಪ್ರಕರಣ ದಾಖಲಿಸಿದ ಪೊಲೀಸರು ನಾಗರಾಜುನನ್ನು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.