ADVERTISEMENT

ತುಮಕೂರು: ಸಮಾನ ವೇತನಕ್ಕೆ ಆಗ್ರಹಿಸಿ ಭೂ ಮಾಪಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:27 IST
Last Updated 2 ಜುಲೈ 2025, 6:27 IST
ಕುಣಿಗಲ್ ತಾಲ್ಲೂಕು ಪರವಾನಗಿ ಪಡೆದ ಭೂ ಮಾಪಕರು ಪ್ರತಿಭಟನೆ ನಡೆಸಿ ಸಹಾಯಕ ನಿರ್ದೇಶಕ ತೋಂಟರಾದ್ಯ ಅವರಿಗೆ ಮನವಿ ಸಲ್ಲಿಸಿದರು
ಕುಣಿಗಲ್ ತಾಲ್ಲೂಕು ಪರವಾನಗಿ ಪಡೆದ ಭೂ ಮಾಪಕರು ಪ್ರತಿಭಟನೆ ನಡೆಸಿ ಸಹಾಯಕ ನಿರ್ದೇಶಕ ತೋಂಟರಾದ್ಯ ಅವರಿಗೆ ಮನವಿ ಸಲ್ಲಿಸಿದರು   

ಕುಣಿಗಲ್: ಪೋಡಿ ಮುಕ್ತ ಗ್ರಾಮ, ಇ-ಸ್ವತ್ತು ಸೇರಿದಂತೆ ವಿವಿಧ ರೀತಿಯಲ್ಲಿ ಭೂ ಮಾಪನ ಇಲಾಖೆಯ ಕೆಲಸ ಮಾಡುತ್ತಿರುವ ಪರವಾನಗಿ ಪಡೆದ ಭೂ ಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ಪರವಾನಗಿ ಪಡೆದ ಭೂಮಾಪಕರು ಮಂಗಳವಾರ ಪ್ರತಿಭಟನೆ ನಡೆಸಿ ಉಪನಿರ್ದೇಶಕ ತೋಂಟಾರಾಧ್ಯ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿದ ಭೂ ಮಾಪಕರ ಸಂಘದ ಅಧ್ಯಕ್ಷ ಜಯರಾಜ್ ಅರಸು, ಪರವಾನಗಿ ಪಡೆದ ಭೂ ಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಸೇವಾ ಭದ್ರತೆ ನೀಡಲು ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಪ್ರಯೋಜನವಾಗದ ಕಾರಣ ಅಳತೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT