ತುರುವೇಕೆರೆ: ತುರುವೇಕೆರೆ- ತಿಪಟೂರು ಮಾರ್ಗ ಮಧ್ಯದ ಸೋಮೇನಹಳ್ಳಿ ಬಳಿ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಜಾಕೀರ್ ಹುಸೇನ್ (38) ಮೃತಪಟ್ಟಿದ್ದಾರೆ.
ಹುಸೇನ್ ತಿಪಟೂರು ತಾಲ್ಲೂಕಿನ ಹೊಂಗೆಲಕ್ಷ್ಮಿ ಕ್ಷೇತ್ರದ ಸರ್ಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತುರುವೇಕೆರೆ ಕಡೆಯಿಂದ ನೊಣವಿನಕೆರೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.