ADVERTISEMENT

ಮಹಾಲಕ್ಷ್ಮಿ ಮದ್ದರಲಕ್ಕಮ್ಮನವರ ಉತ್ಸವ

ಮಹಾಲಕ್ಷ್ಮಿ ಮದ್ದರಲಕ್ಕಮ್ಮನವರ ದೇವಾಲಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 1:50 IST
Last Updated 20 ನವೆಂಬರ್ 2020, 1:50 IST
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಮಹಾಲಕ್ಷ್ಮಿ ಮದ್ದರಲಕ್ಕಮ್ಮನವರ ಉತ್ಸವ ನಡೆಯಿತು
ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಮಹಾಲಕ್ಷ್ಮಿ ಮದ್ದರಲಕ್ಕಮ್ಮನವರ ಉತ್ಸವ ನಡೆಯಿತು   

ಚಿಕ್ಕನಾಯಕನಹಳ್ಳಿ: ಪಟ್ಟಣದ ಮಹಾಲಕ್ಷ್ಮಿ ಮದ್ದರಲಕ್ಕಮ್ಮನವರ ದೇವಾಲಯದಲ್ಲಿ 25ನೇ ಅಮ್ಮನವರ ರಜತ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಕಾರ್ಯಕ್ರಮ ನಡೆಯಿತು.

ವರ್ಧಂತಿ ಮಹೋತ್ಸವದ ಅಂಗವಾಗಿ ಕ್ಷೇತ್ರಪಾಲಕ ಧೂತರಾಯ ಸ್ವಾಮಿಯವರಿಗೆ ದಂಡಿ ಬಲಿ ಸೇವೆ ನಡೆಸಲಾಯಿತು. ನವಿಲೆ ನಾಗೇಶ್ವರ ಸ್ವಾಮಿಯ ಸನ್ನಿಧಿಯಿಂದ ಪುಣ್ಯ ಜಲವನ್ನು ತಂದು ದೇವಾಲಯದ ನಾಗಸುಬ್ರಹ್ಮಣ್ಯ ಸ್ವಾಮಿಗೆ ಮಹಾಭಿಷೇಕ ನಡೆಸಲಾಯಿತು.

ದೀಪಾವಳಿ ಅಮಾವಾಸ್ಯೆಯಂದು ಬೆಲಗೂರು ಅವಧೂತರು ನೀಡಿರುವ ಅಭಯಾಂಜನೇಯ ಸ್ವಾಮಿಗೆ ವಾಯು
ಸ್ತುತಿ ಪುನಶ್ಚರಣ ಮಧುಪರ್ಕ ಅಭಿಷೇಕ ಹಾಗೂ ಅಕ್ಷಯ ಮಹಾಲಕ್ಷ್ಮಿ ಅಮ್ಮನವರಿಗೆ 108 ಕಮಲ ಪುಷ್ಪಗಳ ಸಮರ್ಪಣೆ ಹಾಗೂ ಕುಂಕುಮಾರ್ಚನೆ ನಡೆಯಿತು.ಬಲಿಪಾಡ್ಯಮಿಯಂದು ಉತ್ಸವ ಮೂರ್ತಿಗೆ ಕರಾವಳಿ ಶೈಲಿಯ ನೂತನ ಅಟ್ಟೆ ಪ್ರಭಾವಳಿ ಹಾಗೂ ರಜತ ಕವಚ ಸಮರ್ಪಣೆ ಮಹೋತ್ಸವ ಹಾಗೂ ಪಂಜು ಛತ್ರಿ ವಾದ್ಯ ವೈಭವದೊಂದಿಗೆ ನೂತನ ಅಟ್ಟೆ ಪ್ರಭಾವಳಿ ಮತ್ತು ರಜತ ಕವಚಾಲಂಕೃತ ಮಹಾದೇವಿಯ ಸರಳ ರಾಜಬೀದಿ ಉತ್ಸವ ನಡೆಯಿತು. ಈ ವೇಳೆ ಮಾಜಿ ಶಾಸಕ ಸಿ.ಬಿ. ಸುರೇಶ್ ಬಾಬು ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.