ADVERTISEMENT

ಆಂಜನೇಯ ದೇಗುಲದ ಹುಂಡಿ ಕಳವು: ದೂರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 5:48 IST
Last Updated 12 ಏಪ್ರಿಲ್ 2022, 5:48 IST
ಪೋಟೋ : 11.04.2022- ಟಿ.ಎಂ.ಕೆ.- ಟಿಪಿಆರ್ 3: ದೇವಾಲಯದ ಹೊರಾಂಗಣದ ಚಿತ್ರ.
ಪೋಟೋ : 11.04.2022- ಟಿ.ಎಂ.ಕೆ.- ಟಿಪಿಆರ್ 3: ದೇವಾಲಯದ ಹೊರಾಂಗಣದ ಚಿತ್ರ.   

ತಿಪಟೂರು: ನಗರದ ವಿನೋದ ಚಿತ್ರಮಂದಿರದ ಪಕ್ಕದಲ್ಲಿರುವ ವೀರ ಆಂಜನೇಯ ದೇವಾಲಯದ ಮೇಲ್ಚಾವಣಿ ಮುರಿದು ಹುಂಡಿ ಕಳವು ಮಾಡಲಾಗಿದೆ.

ಭಾನುವಾರ ಭಕ್ತಾದಿಗಳು ಸೇರಿಕೊಂಡು ಶ್ರೀರಾಮ ನವಮಿ ಆಚರಣೆ ಮಾಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದು ಪ್ರಸಾದ, ಪಾನಕ, ಫಲಹಾರ ನೀಡಲಾಗಿತ್ತು. ಸೋಮವಾರ ಬೆಳಿಗ್ಗೆ ಪೂಜೆಗೆ ಬಂದಾಗ ದೇವಾಲಯದ ಒಳಗೆ ಇಟ್ಟಿಗೆ ಚೂರು ಬಿದ್ದಿದ್ದವು. ಬಾಗಿಲು ತೆಗೆದು ನೋಡಿದಾಗ ದುಷ್ಕರ್ಮಿಗಳು ಮೇಲ್ಭಾಗದಿಂದ ಇಳಿದು ಹುಂಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ಅರ್ಚಕ ದರ್ಶನ್
ತಿಳಿಸಿದರು.

ಹುಂಡಿಯಲ್ಲಿ ₹ 5 ಸಾವಿರದಿಂದ ₹ 6 ಸಾವಿರ ನಗದು ಇತ್ತು. ಹುಂಡಿಯನ್ನು ದೇವಾಲಯದ ಪಕ್ಕದಲ್ಲಿ ಬಿದ್ದಿದ್ದು ಕಲ್ಲಿನಿಂದ ಹೊಡೆದು ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

ADVERTISEMENT

ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.