ತಿಪಟೂರು: ‘ಆಪರೇಷನ್ ಸಿಂಧೂರ’ ವಿಜಯೋತ್ಸವ ಪ್ರಯುಕ್ತ ಯೋಧರ ಪರಾಕ್ರಮ ಸ್ಮರಿಸುತ್ತಾ ನಗರದಲ್ಲಿ ‘ರಾಷ್ಟ್ರೀಯ ರಕ್ಷಣೆಗಾಗಿ ನಾಗರಿಕರು’ ಘೋಷಣೆಯಡಿ ಬುಧವಾರ ಬೃಹತ್ ತಿರಂಗಾ ಯಾತ್ರೆ ನಡೆಯಿತು.
ನಗರದ ಕೆಂಪಮ್ಮದೇವಿ ದೇವಾಸ್ಥಾನದ ಆವರಣದಲ್ಲಿ ಗುರುಕುಲ ಮಠದ ಇಮ್ಮಡಿ ಕರಿಬಸವದೇಶಿಕೇಂದ್ರ ಸ್ವಾಮಿಜಿ, ಷಡಕ್ಷರ ಮಠದ ರುದ್ರಮುನಿ ಸ್ವಾಮಿಜಿ, ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನದೇಶಿಕೇಂದ್ರ ಸ್ವಾಮೀಜಿ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಜೊತೆಗೆ ತಾಲ್ಲೂಕಿನ ಮಾಜಿ ಸೈನಿಕರು ಯಾತ್ರೆಯ ಮೆರವಣಿಗೆಗೆ ಚಾಲನೆ ನೀಡಿದರು.
ತಿರಂಗಾ ಯಾತ್ರೆಯು ಬಸವೇಶ್ವರ ವೃತ್ತದ ಮೂಲಕ ದೊಡ್ಡಪೇಟೆ, ಸಿಂಗ್ರಿ ನಂಜಪ್ಪ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಕಲ್ಪತರು ಕ್ರೀಡಾಂಗಣದವರೆಗೆ ಸಾಗಿತು. ಮೆರವಣಿಗೆಯಲ್ಲಿ ನಗರದ ಎಲ್ಲ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಸಿಸಿ, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು. ಮೆರವಣಿಗೆಯ ಉದ್ದಕ್ಕೂ ಸಾರ್ವಜನಿಕರು ಭಾರತಮಾತೆಯ ಭಾವಚಿತ್ರಕ್ಕೆ ಹಾಗೂ ಮಾಜಿ ಯೋಧರಿಗೆ ತಿರಂಗಾಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮಾಜಿ ಸೈನಿಕ ಚಂದ್ರು ಮಾತನಾಡಿ, ಸೈನಿಕರು ಸಾವಿಗೂ ಹಿಂಜರಿಯದೆ ಭಾರತ ಮಾತೆಯ ಗೆಲುವೊಂದೇ ಎಂದು ಮನಸ್ಸಿನಲ್ಲಿ ದೃಢ ನಿಶ್ಚಯ ಮತ್ತು ಸಂಕಲ್ಪವನ್ನುವಿಟ್ಟುಕೊಂಡು ಹೊರಾಡುವ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆ ಎಂದರು.
ಮಾಜಿ ಸೈನಿಕರಾದ ಚಂದ್ರು, ಪರಮಶಿವ, ನಟರಾಜು, ಉಮೇಶ್, ಷಭೀರ್.ಎಸ್.ಎಸ್, ಮಂಜುನಾಥ್ ಆರ್., ರವೀಂದ್ರ, ರಾಜಶೇಖರಯ್ಯ, ನಂಜಾಮರಿ, ಷಡಾಕ್ಷರಿ, ಲಿಂಗರಾಜು, ಚಿಕ್ಕಲಿಂಗೇಗೌಡ, ಗಂಗಾಧರಯ್ಯ, ಮಂಜೇಗೌಡ, ದಯಾನಂದಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಬಿ.ಸಿ.ನಾಗೇಶ್, ನಿವೃತ್ತ ಎಸಿಪಿ ಲೋಕೇಶ್ವರ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ನಿಖಿಲ್ ರಾಜಣ್ಣ, ನಗರಸಬೆ ಅಧ್ಯಕ್ಷೆ ಯುಮುನಾ ಧರಣೇಶ್, ಉಪಾಧ್ಯಕ್ಷೆ ಮೇಘಶ್ರೀ ಸುಜಿತ್ ಭೂಷಣ್, ಜೆಡಿಎಸ್ ಮುಖಂಡ ಶಾಂತಕುಮಾರ್, ವೈಧ್ಯ ಶ್ರೀಧರ್, ವಿವೇಜನ್, ತಿರಂಗಾ ಯಾತ್ರೆಯ ಪದಾದಿಕಾರಿ ರಾಮ್‌ಮೋಹನ್, ನಗರಸಭಾ ಸದಸ್ಯರು, ಗ್ರಾ.ಪಂ. ಸದಸ್ಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.