ತಿಪಟೂರು: ತಾಲ್ಲೂಕಿನಲ್ಲಿ ಶುಕ್ರವಾರ ಸುರಿದ ಮಳೆಗೆ ಗ್ರಾಮದ ಚರಂಡಿ ಹಾಗೂ ರಾಜಕಾಲುವೆಗಳು ಮುಚ್ಚಿದ ಪರಿಣಾಮ ಮಳೆ ನೀರು ರಸ್ತೆ ಹಾಗೂ ಯುಜಿಡಿ ಪೈಪ್‌ನಲ್ಲಿ ಸೇರಿ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿಯಾಯಿತು.
ನಗರದ ಕೋಡಿ ವೃತ್ತದ ಬಳಿ ಸುರಿದ ಮಳೆಗೆ ಒಳಚರಂಡಿ ಉಕ್ಕಿ ಬಿ.ಎಚ್. ರಸ್ತೆಯು ಕೊಳೆಚೆ ನೀರಿನಿಂದ ಜಲಾವೃತಗೊಂಡಿತ್ತು. ವಾಹನ ಸವಾರರು ಹಾಗೂ ಪಾದಚಾರಿಗಳು ಕೊಳಚೆ ನೀರಿನಲ್ಲಿಯೇ ಸಂಚರಿಸಿದವು.
ಯುಜಿಡಿ ದುರಸ್ತಿಗಾಗಿ ನಗರಸಭೆಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಪ್ರಯೋಜನವಿಲ್ಲದಂತಾಗಿದೆ.
ಮಳೆ ನೀರು ಒಳಚರಂಡಿ ಮೂಲಕ ಉಕ್ಕಿಹರಿದ ಪರಿಣಾಮ ನಗರದ ತ್ಯಾಜ್ಯ ಅಕ್ಕಪಕ್ಕವಿರುವ ಹಳ್ಳಗಳ ಮೂಲಕ ಗ್ರಾಮಾಂತರ ಪ್ರದೇಶದ ಕೆರೆ ಸೇರುತ್ತದೆ. ನಂತರ ಅಲ್ಲಿಂದ ಹಳ್ಳಗಳ ಮೂಲಕ ಈಚನೂರು ಕೆರೆ ಸೇರುತ್ತದೆ. ಕೂಡಲೇ ಒಳಚರಂಡಿ ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದರು.
ಯುಜಿಡಿ ಸಮಸ್ಯೆ ತಿಳಿಸಲು ನಗರಸಭೆ ಆಯುಕ್ತರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗುವುದಿಲ್ಲ. ಮಳೆ ಪ್ರಮಾಣ ಹೆಚ್ಚಾದಾಗ ಈ ಸಮಸ್ಯೆ ತಪ್ಪಿದ್ದಲ್ಲ. ನಾಮಕಾವಸ್ಥೆಯ ದುರಸ್ತಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ರಾಜಶೇಖರ್ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.