ADVERTISEMENT

ತಿಪಟೂರು: ರಸ್ತೆ ಬದಿ ಆಲದ ಮರಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 14:14 IST
Last Updated 11 ಏಪ್ರಿಲ್ 2025, 14:14 IST
ಆಲದ ಮರದ ಬುಡಕ್ಕೆ ಬೆಂಕಿ ಹಚ್ಚಲಾಗಿತ್ತು
ಆಲದ ಮರದ ಬುಡಕ್ಕೆ ಬೆಂಕಿ ಹಚ್ಚಲಾಗಿತ್ತು   

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ತಿಪಟೂರು-ಹಾಲ್ಕುರಿಕೆ ರಸ್ತೆಯ ಮಣಕಿಕೆರೆ ಗೇಟ್ ಬಳಿ ಕೆಲದಿನಗಳ ಹಿಂದೆ ರಸ್ತೆ ಬದಿಯ ಆಲದ ಮರವೊಂದರ ಕೊಂಬೆ ಮುರಿದು ಬಿದ್ದಿತ್ತು. ಕೊಂಬೆಗಳನ್ನು ಕಡಿದ ಪರಿಣಾಮ ಇಡೀ ಮರವೇ ಒಣಗಿ ಹೋಗಿತ್ತು.

ಕಿಡಿಗೇಡಿಗಳು 20 ಅಡಿ ಎತ್ತರದ ಮರದ ಬುಡಕ್ಕೆ ಬೆಂಕಿ ಹಚ್ಚಿದ್ದು, ಬೆಂಕಿಯ ಕೆನ್ನಾಲಿಗೆ ಇಡೀ ಮರದ ಬುಡವನ್ನೇ ದಹಿಸುತ್ತಿದೆ. ಬೆಂಕಿಗೆ ಬೆಂದ ಮರ ರಸ್ತೆಗೆ ಬೀಳುತ್ತದೆ. ಇದರಿಂದ ವಾಹನ ಸವಾರರು, ದಾರಿಹೋಕರಿಗೆ ಪ್ರಾಣಾಪಾಯ ಎದುರಾಗುವ ಅಪಾಯವಿದೆ. ಅರಣ್ಯ ಇಲಾಖೆ ಅಥವಾ ಲೋಕಪಯೋಗಿ ಇಲಾಖೆ ತುರ್ತಾಗಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT