ADVERTISEMENT

ತಿಪಟೂರು: ಕುಡಿವ ನೀರು ಪೈರೈಕೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:01 IST
Last Updated 10 ಮಾರ್ಚ್ 2025, 14:01 IST
ತಿಪಟೂರು ಸಿಂಗ್ರೀ ನಂಜಪ್ಪ ವೃತ್ತ ಬಳಿ ನಗರಕ್ಕೆ ಕುಡಿಯುವ ನೀರಿಗಾಗಿ ಆಗ್ರಹಿಸಿ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು
ತಿಪಟೂರು ಸಿಂಗ್ರೀ ನಂಜಪ್ಪ ವೃತ್ತ ಬಳಿ ನಗರಕ್ಕೆ ಕುಡಿಯುವ ನೀರಿಗಾಗಿ ಆಗ್ರಹಿಸಿ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು   

ತಿಪಟೂರು: ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲು ನಗರಸಭೆ ವಿಫಲವಾಗಿದೆ. ಕುಡಿಯುವ ನೀರಿಗೆ ಜನರು ಪರದಾಡ ಬೇಕಾದ ಪರಿಸ್ಥಿತಿ ಉಂಟು ಮಾಡಿರುವ ನಗರಸಭೆ ಹಾಗೂ ಸರ್ಕಾರದ ವಿರುದ್ಧ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ಸಿಂಗ್ರೀ ನಂಜಪ್ಪ ವೃತ್ತದ ಬಳಿ ರಸ್ತೆಗಳಿದು ಪೌರಾಯುಕ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್, ಶಾಸಕರ ಆಡಳಿತ ವೈಫಲ್ಯದ ಪರಿಣಾಮ ನಗರದ ಜನ ಕುಡಿಯುವ ನೀರಿಗೂ ಪರಿತಪಿಸಬೇಕಾಗಿದೆ. ಯುಜಿಡಿ ನೀರು ಈಚನೂರು ಕೆರೆ ಸೇರಿದ ಪರಿಣಾಮ ಕಲುಷಿತ ನೀರು ಸೇವಿಸಬೇಕಾಗಿದೆ ಎಂದರು.

ನಗರಸಭೆ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ನಗರವಾಸಿಗಳ ಸಮಸ್ಯೆ ಆಲಿಸದೆ ಆಡಳಿತ ನಡೆಸುತ್ತಿದೆ. ಪ್ರತಿವರ್ಷ ಸಾವಿರಾರು ರೂಪಾಯಿ ತೆರಿಗೆ ಪಡೆಯುವ ನಗರಸಭೆ ಕುಡಿಯುವ ನೀರು ಹಾಗೂ ಮೂಲ ಸೌಕರ್ಯ ಒದಗಿಸಲು ವಿಫಲವಾಗಿದೆ. ಇನ್ನೂ ಬೇಸಿಗೆ ಬರುವ ಮುನ್ನವೇ ಮಾರ್ಚ್ ನಲ್ಲಿ ಇಷ್ಟೊಂದು ನೀರಿನ ಸಮಸ್ಯೆ ಉಂಟಾದರೆ ಮುಂದಿನ ಮೇ, ಜೂನ್ ತಿಂಗಳಿನಲ್ಲಿ ಜನ ಜಾನುವಾರು ಕುಡಿಯುವ ನೀರಿಲ್ಲದೆ ಜೀವಕಳೆದುಕೊಳ್ಳುವ ಸ್ಥಿತಿ ಬರಬಹುದು ಎಂದರು.

ADVERTISEMENT

ಈ ವರ್ಷದ ಬಜೆಟ್‌ನಲ್ಲಿ ಒಂದು ನಯಾಪೈಸೆಯನ್ನು ತಾಲ್ಲೂಕಿಗೆ ಶಾಸಕರು ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮತ್ತಿಘಟ್ಟ ಶಿವಸ್ವಾಮಿ ಮಾತನಾಡಿ, ನಗರದ ಎಲ್ಲ ವಾರ್ಡಗಳಲ್ಲಿಯೂ ನೀರಿನ ಸಮಸ್ಯೆ ಹೆಚ್ಚಾಗಿದೆ. ಟ್ಯಾಂಕರ್ ಮೂಲಕ ಹಣ ನೀಡಿ ನೀರು ಪೂರೈಸಿ ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದರು. 

ಮಾಜಿ ನಗರಸಭಾ ಸದಸ್ಯ ಪ್ರಸನ್ನ ಕುಮಾರ್ ಮಾತನಾಡಿ ವೈ.ಕೆ ರಾಮಯ್ಯ ಶ್ರಮದ ಪರಿಣಾಮ ಹೇಮಾವತಿ ನೀರು ತುಮಕೂರು ಜಿಲ್ಲೆಗೆ ದೊರೆತಿದೆ. ನಮ್ಮ ಪಾಲಿನ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಗೆ ಯುಜಿಡಿ ಕೊಳಚೆ ನೀರು ಕಲುಷಿತವಾಗಿದ್ದು, ಬಹುತೇಕ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದರು.

ಪ್ರತಿಭಟನೆಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮತ್ತಿಘಟ್ಟ ಶಿವಸ್ವಾಮಿ, ಯುವಘಟಕದ ಅಧ್ಯಕ್ಷ ಸುದರ್ಶನ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಮ್ರಾನ್ ಕೆ.ಕೆ.ಮುಖಂಡರಾದ ನಟರಾಜು, ಕೆ.ಎಂ ತಾತಯ್ಯ, ನಾಗರಾಜು, ಗುರುಮೂರ್ತಿ ಹಾಜರಿದ್ದರು.

ಜನಪತ್ರನಿಧಿಗಳ ನಿರ್ಲಕ್ಷ್ಯದಿಂದ ಇಂತಹ ದುಸ್ಥಿತಿ ಬಂದಿದೆ. ಶಾಶ್ವತ ಕುಡಿಯುವ ನೀರು ಪೂರೈಸುವವರೆಗೂ ಹೋರಾಟ ಮುಂದುವರೆಯಲಿದೆ ಕೆ.ಟಿ.ಶಾಂತಕುಮಾರ್ ಸ್ಥಳೀಯ 
ನಗರದ ಸಿಂಗ್ರೀ ನಂಜಪ್ಪ ವೃತ್ತದ ಬಳಿ ನಗರಕ್ಕೆ ಕುಡಿಯುವ ನೀರಿಗಾಗಿ ಆಗ್ರಹಿಸಿ ಜೆಡಿಎಸ್ ಮುಖಂಡ ಕೆ.ಟಿ ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪೌರಾಯುಕ್ತರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಧರಣಿ ಸತ್ಯಾಗ್ರಹವನ್ನು ಸೋಮವಾರ ನಡೆಸಿ ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

Quote - ಚರಂಡಿಗಳು ತ್ಯಾಜ್ಯದಿಂದ ಕೂಡಿವೆ. ರ್ದುವಾಸನೆ ಬರುತ್ತಿದೆ. ಆಯುಕ್ತರಿಗೆ ಮನವಿ ಮಾಡಿದರೂ ಯಾವ ರೀತಿ ಸ್ವಂದಿಸುತ್ತಿಲ್ಲ ರತ್ನ ಪ್ರತಿಭಟನಕಾರ

Quote - ಜನಪತ್ರನಿಧಿಗಳ ನಿರ್ಲಕ್ಷ್ಯದಿಂದ ಇಂತಹ ದುಸ್ಥಿತಿ ಬಂದಿದೆ. ಶಾಶ್ವತ ಕುಡಿಯುವ ನೀರು ಪೂರೈಸುವವರೆಗೂ ಹೋರಾಟ ಮುಂದುವರೆಯಲಿದೆ ಕೆ.ಟಿ.ಶಾಂತಕುಮಾರ್ ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.