ADVERTISEMENT

‘ಕೊಬ್ಬರಿಗೆ ಬೆಂಬಲ ಬೆಲೆ; ಮುಖ್ಯಮಂತ್ರಿ ಬಳಿ ನಿಯೋಗ’

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 11:05 IST
Last Updated 5 ಜೂನ್ 2020, 11:05 IST
ತುರುವೇಕೆರೆ ತಾಲ್ಲೂಕಿನ ಡಿ.ಕಲ್ಕೆರೆ ಗ್ರಾಮದಲ್ಲಿ ಗ್ರಾಮೀಣ ಸಂತೆಗಳ ಕಟ್ಟಡ ನಿರ್ಮಾಣಕ್ಕೆ ಶಾಸಕ ಮಸಾಲಜಯರಾಂ ಭೂಮಿಪೂಜೆ ನೆರವೇರಿಸಿದರು
ತುರುವೇಕೆರೆ ತಾಲ್ಲೂಕಿನ ಡಿ.ಕಲ್ಕೆರೆ ಗ್ರಾಮದಲ್ಲಿ ಗ್ರಾಮೀಣ ಸಂತೆಗಳ ಕಟ್ಟಡ ನಿರ್ಮಾಣಕ್ಕೆ ಶಾಸಕ ಮಸಾಲಜಯರಾಂ ಭೂಮಿಪೂಜೆ ನೆರವೇರಿಸಿದರು   

ತುರುವೇಕೆರೆ: ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಶುಕ್ರವಾರ ಮನವಿ ನೀಡಲು ಎಪಿಎಂಸಿ ಸದಸ್ಯರೊಂದಿಗೆ ನಿಯೋಗ ಹೋಗುವುದಾಗಿ ಶಾಸಕ ಮಸಾಲ ಜಯರಾಂ ಹೇಳಿದರು.

ತಾಲ್ಲೂಕಿನ ಮಾಯಸಂದ್ರ ಮತ್ತು ಡಿ.ಕಲ್ಕೆರೆ ಗ್ರಾಮದಲ್ಲಿ ಎಪಿಎಂಸಿಯ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ ₹75 ಲಕ್ಷ ವೆಚ್ಚದ ಗ್ರಾಮೀಣ ಸಂತೆಗಳ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಲ್ಲೂಕಿನ ಎಪಿಎಂಸಿ ಅಧ್ಯಕ್ಷ ನರಸಿಂಹರಾಜು ಮಾತನಾಡಿದರು. ಪ್ರಸನ್ನ, ವಿ.ಟಿ.ವೆಂಕಟರಾಮು, ಕಾಂತರಾಜು, ನಾಗರಾಜು, ವಿಜ ಯೇಂದ್ರ, ಇಂದ್ರಮ್ಮ, ಲೋಕೇಶ್, ಮಧುಸೂದನ್, ವೆಂಕಟೇಶ್, ರಾಜೇಶ್, ಧನಪಾಲ್, ಎನ್‍.ಆರ್‌.ಜಯರಾಂ, ಸುರೇಶ್‍ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.