ತೋವಿನಕೆರೆ: ಪಾಯಸಾಗರ್ ಮುನಿ ಚಾತುರ್ಮಾಸ ಕೈಗೊಂಡ ನಂತರ ತೋವಿನಕೆರೆ ಚಂದ್ರನಾಥ ಸ್ವಾಮಿ ದೇವಾಲಯ ಜೈನ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿದೆ.
ಇಂದೋರ್, ಮುಂಬೈ, ಗುಜರಾತ್‌ನ ಹಲವೆಡೆಗಳಿಂದ ನೂರಾರು ಜೈನ ಭಕ್ತರು ಪ್ರತಿನಿತ್ಯ ಇಲ್ಲಿಗೆ ಬಂದು ಮುನಿಗಳ ದರ್ಶನ ಪಡೆಯುತ್ತಿದ್ದಾರೆ. ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದು, ರಾಜ್ಯದ ವಿವಿಧ ಕಡೆಗಳಿಂದ ಭಕ್ತರು ಭಾಗವಹಿಸುತ್ತಿದ್ದಾರೆ.
ದೂರದಿಂದ ಬರುವ ಭಕ್ತರು 2-3 ದಿನ ಇಲ್ಲಿಯೇ ವಾಸ್ತವ್ಯ ಹೂಡಿ ದೇವರಿಗೆ ಅಭಿಷೇಕ ಮಾಡುವುದು, ಸ್ವಾಮೀಜಿಗೆ ಆಹಾರ ನೀಡುವುದು, ಬೆಳಿಗ್ಗೆಯಿಂದ ಸಂಜೆವರೆಗೆ ಉಪನ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ.
ಮುನಿಗಳು ಪ್ರತಿನಿತ್ಯ ಬೆಳಗ್ಗೆ ಒಂದು ಸಲ ಮಾತ್ರ ಆಹಾರ ಸೇವಿಸುತ್ತಿದ್ದಾರೆ. ಮಳೆ ನೀರು ಸಂಗ್ರಹ ಮತ್ತು ಉಪಯೋಗದ ಬಗ್ಗೆ ಭಕ್ತರಿಗೆ ಅರಿವು ಮೂಡಿಸುತ್ತಿದ್ದಾರೆ.
‘ನಿತ್ಯ ಮೂರು ಕಡೆ ಆಹಾರದ ವ್ಯವಸ್ಥೆ ಮಾಡಲಾಗುತ್ತದೆ. ಮುನಿಗೆ ಎಲ್ಲಿ ಸಮಾಧಾನವಾಗುತ್ತದೆಯೊ ಅಲ್ಲಿ ಆಹಾರ ತೆಗೆದುಕೊಳ್ಳುತ್ತಾರೆ. ಕಂದಮೂಲ ಸೇರಿದಂತೆ ಹಲವು ಪದಾರ್ಥಗಳನ್ನು ಉಪಯೋಗಿಸದೇ ಆಹಾರ ತಯಾರಿಸುತ್ತೇವೆ. ಆಹಾರ ತಯಾರಿಕೆಯಲ್ಲಿ ಶುಚಿತ್ವದ ಬಗ್ಗೆ ಕಾಳಜಿ ವಹಿಸುತ್ತೇವೆ’ ಎನ್ನುತ್ತಾರೆ ಲತಾಧರಣೇಂದ್ರ ಕುಮಾರ್ ಜವಳಿ.
‘ಸ್ವಾಮೀಜಿ ಆಹಾರ ತಯಾರಿಸಲು ಮಳೆ ನೀರು, ಬಾವಿ ನೀರನ್ನು ಉಪಯೋಗಿಸುತ್ತಾರೆ. ಬಾವಿ ನೀರನ್ನು ದೂರದಿಂದ ತರುತ್ತಿದ್ದೇವೆ. ಮುನಿಗಳು ಪಾಲಿಸುವ ಸಂಪ್ರದಾಯಕ್ಕೆ ತೊಂದರೆಯಾಗದಂತೆ ನಿಗಾ ವಹಿಸಿದ್ದೇವೆ’ ಎನ್ನುತ್ತಾರೆ ನಮಿತ ಜೈನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.