ತಿಪಟೂರು: ಕೇಂದ್ರ ಸರ್ಕಾರಕ್ವಿಂಟಲ್ ಕೊಬ್ಬರಿಗೆ ₹ 10,300 ಬೆಂಬಲ ಬೆಲೆ ಘೋಷಿಸಿದೆ.
ಏಷ್ಯಾದಲ್ಲಿಯೇ ಅತೀ ದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿರುವ ತಿಪಟೂರಿನಲ್ಲಿ ಕೊಬ್ಬರಿ ಬೆಲೆ ಇಳಿಕೆಯಿಂದ ರೈತರು ಆಘಾತಗೊಂಡಿದ್ದರು. ಈ ಬೆಂಬಲ ಬೆಲೆ ಘೋಷಣೆಯು ತುಸು ಚೇತರಿಸಿಕೊಳ್ಳುವಂತೆ ಮಾಡಿದೆ.
ಪ್ರಸ್ತುತ ತಿಪಟೂರು ಕೊಬ್ಬರಿ ಬೆಲೆ ಕ್ವಿಂಟಲ್ಗೆ ₹ 10 ಸಾವಿರ ಇದೆ. ತಿಪಟೂರು ಎಪಿಎಂಸಿಯಲ್ಲಿ ಕಳೆದ ವರ್ಷ 42 ಸಾವಿರ ಟನ್ ಕೊಬ್ಬರಿ ವಹಿವಾಟು ನಡೆದಿತ್ತು. ಕ್ವಿಂಟಲ್ ಒಂದಕ್ಕೆ ₹ 19,000 ರಿಂದ ₹20,000 ವರೆವಿಗೂ ಬೆಲೆ ದೊರಕಿತ್ತು.
ರೈತರು ಕನಿಷ್ಠ ₹ 15,000 ಬೆಂಬಲ ಬೆಲೆ ಘೋಷಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಸರ್ಕಾರ ₹ 10,300 ಬೆಂಬಲ ಬೆಲೆ ಘೋಷಿಸಿರುವುದು ರೈತರಿಗೆ ಬೇಸರ ತರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.