ADVERTISEMENT

ತೋವಿನಕೆರೆ | ಸಿದ್ಧರಬೆಟ್ಟದ ಗುಡ್ಡಗಳಲ್ಲಿ ಚಾರಣ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:33 IST
Last Updated 15 ಸೆಪ್ಟೆಂಬರ್ 2025, 6:33 IST
ತೋವಿನಕೆರೆ ಸಮೀಪದ ಸಿದ್ಧರಬೆಟ್ಟ ಅಸುಪಾಸಿನ ಬೆಟ್ಟ ಗುಡ್ಡಗಳಲ್ಲಿ ನಡೆದ ಟ್ರಕ್ಕಿಂಗ್‌ನಲ್ಲಿ ಪಾಲ್ಗೊಂಡವರು
ತೋವಿನಕೆರೆ ಸಮೀಪದ ಸಿದ್ಧರಬೆಟ್ಟ ಅಸುಪಾಸಿನ ಬೆಟ್ಟ ಗುಡ್ಡಗಳಲ್ಲಿ ನಡೆದ ಟ್ರಕ್ಕಿಂಗ್‌ನಲ್ಲಿ ಪಾಲ್ಗೊಂಡವರು   

ತೋವಿನಕೆರೆ: ಹೊಲತಾಳುನಲ್ಲಿ ಭಾನುವಾರ ಬೆಟ್ಟ ಗುಡ್ಡಗಳಲ್ಲಿ ಓಡಾಟ (ಟ್ರಕ್ಕಿಂಗ್‌) ನಡೆಯಿತು.

ಸಾಹಿತಿ ನಟರಾಜ ಬೂದಾಳು ಟ್ರಕ್ಕಿಂಗ್‌ನಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಕೃತಿಯಲ್ಲಿ ಒಂದಾಗಿ ನಮ್ಮನ್ನು ನಾವು ಅರಿತುಕೊಳ್ಳಲು ಚಾರಣ ಸಹಕಾರಿ. ಪ್ರಕೃತಿ ಮಡಿಲಲ್ಲಿ ಹಲವು ಜನಪದ ಹಾಡುಗಳು ಹುಟ್ಟಿಕೊಂಡವು. ಆರೋಗ್ಯಕ್ಕೆ ಸಂಬಂಧಿಸಿದ ಗಿಡ ಬೆಳೆದವು. ಪ್ರಾಣಿ ಪಕ್ಷಿಗಳ ತಾಣವಾಯಿತು. ಸಮೃದ್ಧ ದುಂಬಿ ಮತ್ತು ಕೀಟಗಳ ಬೆಳೆದು ನಮ್ಮ ಆಹಾರಕ್ಕೆ ಭದ್ರತೆ ನೀಡಿದವು ಎಂದು ವಿವರಿಸಿದರು.

ಚಾರಣದ ಸಮಯದಲ್ಲಿ ಒಬ್ಬರಿಗೊಬ್ಬರು ಮಾತನಾಡಿಕೊಂಡು ಸಾಗಬೇಡಿ, ಮೌನದಿಂದ ಓಡಾಟ ನಡೆಸಿ. ನಾಡಿನಲ್ಲಿ ಸಿಗುವ ಕೃತಕ ಶಬ್ದಗಳು ಇಲ್ಲಿ ಸಿಗುವುದಿಲ್ಲ. ಪ್ರಕೃತಿಯ ಶಬ್ದಗಳನ್ನು ಧ್ಯಾನದ ರೀತಿ ಅರಿತುಕೊಳ್ಳಿ. ಏಕಾಗ್ರತೆಯಿಂದ ಎಲ್ಲವನ್ನು ಅರಿಯಿರಿ ಎಂದು ಸಲಹೆ ನೀಡಿದರು.

ADVERTISEMENT

ಸಿದ್ಧಗಂಯ್ಯ ಹೊಲತಾಳು ಮಾತನಾಡಿದರು.

ಕಾಡಂಚಿನ ದಾರಿಯಲ್ಲಿ ಸಿಗುವ ಔಷದಿ ಸಸ್ಯಗಳ ಬಗ್ಗೆ ಗೌರಗೊಂಡನಹಳ್ಳಿಯ ನಾಟಿ ವೈದ್ಯ ಸಿದ್ಧಪ್ಪ ಮತ್ತು ಚಿದಾನಂದ ಮಾಹಿತಿ ನೀಡಿದರು.

ಲೇಖಕ ರವಿಕುಮಾರ್ ನೀಹಾ, ಬುಕ್ಕಪಟಣ್ಣ ಕಾಂತರಾಜು, ಪಾತಗಾನಹಳ್ಳಿ ಕೃಷಿಕರಾದ ನಟರಾಜು, ನಾಗರಾಜಯ್ಯ, ಸಾವಯವ ಕೃಷಿಕ ವೆಂಕಟೇಶ, ಅಕ್ಷಯ್ಯ ಕಲ್ಪದ ಮಂಜುನಾಥ, ಧರ್ಮವತಿ ಹಾಗೂ ಐವತ್ತಕ್ಕೂ ಹೆಚ್ಚು ಜನ ಟ್ರಕ್ಕಿಂಗ್‌ನಲ್ಲಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.