ತುಮಕೂರು: ಕ್ಷುಲ್ಲಕ ಕಾರಣಕ್ಕೆ ಬುಧವಾರ ನಗರದ ಮಂಡಿಪೇಟೆಯಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ದಾದಾಫೀರ್ (55) ಎಂಬುವರು ಕೊಲೆಯಾಗಿದ್ದು, ಆರೋಪಿ ಮಧುಕುಮಾರ್ ಎಂಬಾತನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಧುಕುಮಾರ್ ಸಹೋದರಿ ಮಂಡಿಪೇಟೆ ಸಮೀಪ ಚಹಾ ಅಂಗಡಿ ನಡೆಸುತ್ತಾರೆ. ಬುಧವಾರ ಅಲ್ಲಿಗೆ ಬಂದ ದಾದಾಫಿರ್ ಚಹಾ ಕುಡಿದು, ಬಿಸ್ಕಿಟ್ ತಿಂದು ಹಣ ಕೊಡಲು ತಕರಾರು ತೆಗೆದಿದ್ದಾರೆ. ಅಲ್ಲೇ ಇದ್ದ ಮಧುಕುಮಾರ್ ಇದನ್ನು ಪ್ರಶ್ನಿಸಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಸ್ಥಳದಲ್ಲಿ ಇದ್ದವರು ಜಗಳ ಬಿಡಿಸಿ ಕಳುಹಿಸಿದ್ದಾರೆ.
ಮಧುಕರ್ ಮಧ್ಯಾಹ್ನ ಮನೆಗೆ ತೆರಳುತ್ತಿದ್ದ ಸಮಯದಲ್ಲಿ ಮಂಡಿಪೇಟೆ ಜಾಮಿಯಾ ಮಸೀದಿ ಬಳಿ ದಾದಾಫಿರ್ ಅಡ್ಡಗಟ್ಟಿ ಜಗಳ ತೆಗೆದಿದ್ದಾರೆ. ಮಧುಕರ್ ಕೆನ್ನೆಗೆ ದಾದಾಫಿರ್ ಹೊಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಧುಕರ್ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಕುಸಿದು ಬಿದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.