
ತುಮಕೂರು: ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ‘ಪುಸ್ತಕ ಗೂಡು’ ಮಿನಿ ಗ್ರಂಥಾಲಯ ಆರಂಭಿಸಲಾಗಿದೆ.
ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಭಿಮಾನಿ ಬಳಗದಿಂದ ಪುಸ್ತಕ ಗೂಡು ಪ್ರಾರಂಭಿಸಿದ್ದು, ಶನಿವಾರ ಸೋಮಣ್ಣ ಚಾಲನೆ ನೀಡಿದರು. ಬಸ್ ನಿಲ್ದಾಣ, ಉದ್ಯಾನವನ ಜನ ಸೇರುವ ಕಡೆ ಪುಸ್ತಕ ಗೂಡು ಸ್ಥಾಪಿಸುವಂತೆ ಸಲಹೆ ಮಾಡಿದರು.
ಲೇಖಕಿ ಬಾ.ಹ.ರಮಾಕುಮಾರಿ, ‘ಗ್ರಂಥಾಲಯಗಳಿಗೆ ಹೋಗಿ ಓದುವವರ ಸಂಖ್ಯೆ ಕಡಿಮೆಯಾಗಿದೆ. ಪುಸ್ತಕ ಪ್ರೀತಿ ಬೆಳೆಯಬೇಕು. ಇಂತಹ ಕಾರ್ಯಗಳ ಮೂಲಕ ಕತ್ತಲೆಯಲ್ಲಿರುವ ಪುಸ್ತಕಗಳಿಗೆ ಬೆಳಕು ತೋರಿದಂತಾಗುತ್ತದೆ’ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಗಂಗಾ ಆಸ್ಪತ್ರೆ ವೈದ್ಯ ಎಚ್.ಬಿ.ಎಂ.ಹಿರೇಮಠ, ಸಿದ್ಧಗಂಗಾ ಕಾಲೇಜು ಗ್ರಂಥಪಾಲಕಿ ಪರಿಮಳಾ ಸತೀಶ್, ಲೇಖಕಿ ಶಾಲಿನಿ ದೇವಪ್ರಕಾಶ್, ಮುಖಂಡರಾದ ಧನಿಯಾಕುಮಾರ್, ಗಿರಿಜಾ ಧನಿಯಾಕುಮಾರ್, ಗುರುರಾಘವೇಂದ್ರ, ಜೆ.ವಿಠಲ್, ರಾಮಚಂದ್ರರಾವ್, ಶಬ್ಬೀರ್ ಅಹ್ಮದ್, ಸಿದ್ಧಲಿಂಗಸ್ವಾಮಿ, ಸತೀಶ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.