ADVERTISEMENT

ತುಮಕೂರು | ಪತ್ನಿ, ಅತ್ತೆ ಕಿರುಕುಳ: ಗಂಡ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 7:51 IST
Last Updated 8 ಅಕ್ಟೋಬರ್ 2025, 7:51 IST
<div class="paragraphs"><p>&nbsp;ಆತ್ಮಹತ್ಯೆಗೆ ಯತ್ನ</p></div>

 ಆತ್ಮಹತ್ಯೆಗೆ ಯತ್ನ

   

ತುಮಕೂರು: ಪತ್ನಿ, ಅತ್ತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಮರಳೂರು ದಿಣ್ಣೆಯ ನಿವಾಸಿ ಸಲ್ಮಾನ್‌ ಪಾಷ (30) ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಸಲ್ಮಾನ್‌ ಆಟೊ ಚಾಲಕರಾಗಿದ್ದಾರೆ. ಮನೆಯಲ್ಲಿ ವಿಷ ಸೇವಿಸಿದ್ದು, ಸದ್ಯ ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆತ್ಮಹತ್ಯೆಗೂ ಮುನ್ನ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ADVERTISEMENT

‘ಹೆಂಡತಿ ಫಿರ್ದೋಸ್‌ ಮತ್ತು ಅತ್ತೆ ಮಹಿಳಾ ಪೊಲೀಸ್ ಠಾಣೆಗೆ ಪದೇ ಪದೇ ಕರೆಸಿ, ನನಗೆ ಹೊಡೆಯುತ್ತಾರೆ. ಪೊಲೀಸರ ಎದುರೇ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಎಐಎಂಐಎಂ ಪಕ್ಷ ಅಧ್ಯಕ್ಷ ಸೈಯದ್‌ ಬುರ್ಹನ್‌ ಉದ್ದೀನ್‌ ಕುಮ್ಮಕ್ಕು ನೀಡುತ್ತಿದ್ದಾರೆ. ಜಯನಗರ ಠಾಣೆಗೆ ದೂರು ನೀಡಿದರೂ ಪ್ರಕರಣ ದಾಖಲಿಸಿಲ್ಲ’ ಎಂದು ಆರೋಪಿಸಿದ್ದಾರೆ.

ಸಲ್ಮಾನ್‌ ವಿಷ ಸೇವಿಸಿದ ನಂತರ ಆತನ ತಾಯಿ ರಕೀಬ್‌ ಉನ್ನೀಸಾ ಜಯನಗರ ಠಾಣೆಗೆ ದೂರು ನೀಡಿದ್ದಾರೆ. ‘ಫಿರ್ದೋಸ್‌, ಅವರ ತಾಯಿ ಮತ್ತು ಸೈಯದ್‌ ಮಗನ ಆತ್ಮಹತ್ಯೆಗೆ ಪ್ರೇರೇಪಿಸಿದ್ದಾರೆ. ಸೈಯದ್‌ ನನಗೆ ರಾಜಕೀಯ ಬಲ ಇದೆ ಎಂದು ದೌರ್ಜನ್ಯ ಎಸಗುತ್ತಿದ್ದಾರೆ. ಈ ಹಿಂದೆ ಒಮ್ಮೆ ಮನೆಯ ಹತ್ತಿರ ಬಂದು ಗಲಾಟೆ ಮಾಡಿ, ನನ್ನ ಮಗನನ್ನು ಜೈಲಿಗೆ ಕಳುಹಿಸಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.