ADVERTISEMENT

ಕುಣಿಗಲ್ | ಜನಮನ ಸೆಳೆದ ಮಕ್ಕಳ ಜನಪದ ಉತ್ಸವ

​ಪ್ರಜಾವಾಣಿ ವಾರ್ತೆ
Published 11 ಮೇ 2025, 15:11 IST
Last Updated 11 ಮೇ 2025, 15:11 IST
ಕುಣಿಗಲ್ ಪಟ್ಟಣದಲ್ಲಿ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ನಡೆಯಿತು
ಕುಣಿಗಲ್ ಪಟ್ಟಣದಲ್ಲಿ ಮಕ್ಕಳಿಂದ ಮಲ್ಲಕಂಬ ಪ್ರದರ್ಶನ ನಡೆಯಿತು   

ಕುಣಿಗಲ್: ಪಟ್ಟಣದ ರಂಗನಾಥ್ ಸ್ಪೋರ್ಟ್‌ ಕ್ಲಬ್‌ನ ವಾರ್ಷಿಕೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಜನಪದ ಉತ್ಸವದಲ್ಲಿ 400ಕ್ಕೂ ಹೆಚ್ಚು ಮಕ್ಕಳು ವಿವಿಧ ಜನಪದ ಕಲೆಗಳ ಪ್ರದರ್ಶನ ನಡೆಸಿ ಜನಮನ ಸೆಳೆದರು.

ಯಕ್ಷಗಾನ, ಕಂಸಾಲೆ, ಪಟಕುಣಿತ, ಡೊಳ್ಳು ಕುಣಿತ ಮತ್ತು ಮಲ್ಲಕಂಬ ಪ್ರದರ್ಶನ ಪಟ್ಟಣದ ನಡೆದವು. ಹುಬ್ಬಳಿಯ ಮಲ್ಲಕಂಬ ತರಬೇತುದಾರ ಕೊಟ್ರೇಶ ಮತ್ತು ಮಾರುತಿ ನೇತೃತ್ವದಲ್ಲಿ ತರಬೇತಿ ನೀಡಲಾಗಿತ್ತು. ಪ್ರಥಮ ಬಾರಿಗೆ ಮಲ್ಲಕಂಬ ಮತ್ತು ಹಗ್ಗದ ಜತೆ ಮಲ್ಲಕಂಬ ಪ್ರದರ್ಶನ ವೀಕ್ಷಕರನ್ನು ರೋಮಾಂಚನಗೊಳಿಸಿದವು.

ಶಾಸಕ ಡಾ.ರಂನಾಥ್, ಕುಣಿಗಲ್ ವ್ಯಾಲಿ ಶಾಲೆ ಸಂಸ್ಥಾಪಕ ಕುಮಾರ್ ಜನಪದ ಉತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.