ಶಿರಾ: ವಿಷ ಸೇವಿಸಿದ್ದ ಶಿಕ್ಷಕಿ ಶಾಂತಮ್ಮ ಚೇತರಿಸಿಕೊಂಡಿದ್ದು ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ತಾಲ್ಲೂಕಿನ ಕೆರೆಯಾಗಲಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಶಾಂತಮ್ಮ ಅವರನ್ಜು ತೊಗರುಗುಂಟೆ ಗ್ರಾಮದ ಶಾಲೆಗೆ ನಿಯೋಜನೆ ಮಾಡಲಾಗಿತ್ತು.
ಗುರುವಾರ ಕೆರೆಯಾಗಲಹಳ್ಳಿ ಶಾಲೆಯಲ್ಲಿದ್ದ ಮುಖ್ಯಶಿಕ್ಷಕ ರಜೆ ಹಾಕಿದ್ದ ಕಾರಣ ಶಿಕ್ಷಕಿ ಶಾಂತಮ್ಮ ಅವರಿಗೆ ಕೆರೆಯಾಗಲಹಳ್ಳಿ ಶಾಲೆಗೆ ಹೋಗುವಂತೆ ಸಿಆರ್‌ಪಿ ಹೇಳಿದ್ದಾರೆ. ‘ಬೇರೆ ಶಾಲೆಗೆ ನಿಯೋಜನೆ ಮಾಡಲಾಗಿದೆ. ನಾನು ಅಲ್ಲಿಗೆ ಹೋಗುವುದಿಲ್ಲ’ಎಂದು ಶಿಕ್ಷಕಿ ಶಾಂತಮ್ಮ ಪಟ್ಟು ಹಿಡಿದಿದ್ದರು.
ಹೋಗದಿದ್ದರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಶಿಕ್ಷಕಿ ವಿಷ ಸೇವಿಸಿದ್ದರು. ಶಿಕ್ಷಕಿಯನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಕಾರಣ ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.