ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಬ್ಯಾಂಕ್ ಲಾಕರ್‌ನಿಂದ ಚಿನ್ನದ ಒಡವೆ ಪಡೆದು, ಹಬ್ಬ ಮುಗಿದ ನಂತರ ಮತ್ತೆ ಲಾಕರ್‌ನಲ್ಲಿ ಇಡಲು ಆಭರಣ ತೆಗೆದುಕೊಂಡು ಹೋಗುವಾಗ ₹20 ಲಕ್ಷ ಮೌಲ್ಯದ 261 ಗ್ರಾಂ ಚಿನ್ನಾಭರಣ ಕಳವಾಗಿದೆ.
‘ನಗರದ ವೀರಶೈವ ಕೋ–ಆಪರೇಟಿವ್ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ ಆಭರಣವನ್ನು ಆ.6ರಂದು ಬಿಡಿಸಿಕೊಂಡು ಬಂದಿದ್ದೆ. 12ರಂದು ವಾಪಸ್ ಲಾಕರ್‌ನಲ್ಲಿ ಇಡಲು ಹೋಗುತ್ತಿದ್ದಾಗ ಬಸ್‌ನಲ್ಲಿ ಒಡವೆ ಇದ್ದ ಡಬ್ಬಿ ಕಾಣೆಯಾಗಿದೆ’ ಎಂದು ಸಿದ್ದರಾಮೇಶ್ವರ ಬಡಾವಣೆ ಸಂಗೀತಾ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ.
ವ್ಯಾನಿಟಿ ಬ್ಯಾಗ್‌ನಿಂದ ಹಣ ತೆಗೆದುಕೊಂಡು ಟಿಕೆಟ್ ಪಡೆಯುವಾಗ ಜಿಪ್ ಹಾಕಿರಲಿಲ್ಲ. ಅದರಲ್ಲಿದ್ದ ಡಬ್ಬಿಯನ್ನು ಯಾರೋ ಕಳ್ಳತನ ಮಾಡಿದ್ದಾರೆ. ಬಸ್‌ನಲ್ಲಿ ತುಂಬಾ ಜನ ಪ್ರಯಾಣಿಕರಿದ್ದರು. ಬ್ಯಾಂಕ್‌ಗೆ ಹೋಗಿ ನೋಡಿದಾಗ ಆಭರಣದ ಡಬ್ಬಿ ಇರಲಿಲ್ಲ ಎಂದು ಸಂಗೀತಾ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.