ADVERTISEMENT

ತುಮಕೂರು | ಮತಗಳ್ಳತನ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 8:01 IST
Last Updated 16 ಆಗಸ್ಟ್ 2025, 8:01 IST
ತುಮಕೂರಿನಲ್ಲಿ ಗುರುವಾರ ರಾತ್ರಿ ಮತಗಳ್ಳತನ ಖಂಡಿಸಿ ಕಾಂಗ್ರೆಸ್‌ ಮುಖಂಡರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಮುಖಂಡರಾದ ಇಕ್ಬಾಲ್‌ ಅಹ್ಮದ್‌, ಗೀತಾ ರಾಜಣ್ಣ, ಮಹೇಶ್, ಫಯಾಜ್, ಷಣ್ಮುಖಪ್ಪ, ಅಸ್ಲಾಂಪಾಷ, ಸುಜಾತಾ, ವಸುಂದರ, ಕವಿತಾ, ನಾಗಮಣಿ, ಮಾರುತಿ, ಕೆಂಪರಾಜು ಇತರರು ಪಾಲ್ಗೊಂಡಿದ್ದರು

ತುಮಕೂರು: ಕಳೆದ ಲೋಕಸಭಾ ಚುನಾವಣೆ, ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಮತಗಳ್ಳತನ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ನಗರದ ಟೌನ್‌ಹಾಲ್‌ ವೃತ್ತದಲ್ಲಿ ಗುರುವಾರ ರಾತ್ರಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ಕ್ರಮ ಖಂಡಿಸಿದರು.

‘ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ಆಗಿದೆ. ಕಾಂಗ್ರೆಸ್‌ ನಾಯಕ ರಾಹುಲ್‍ಗಾಂಧಿ ಸಾಕ್ಷಿ ಸಮೇತ ತೋರಿಸಿಕೊಟ್ಟಿದ್ದಾರೆ. ಮಹಾರಾಷ್ಟ್ರ, ಇತರೆ ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆಯೂ ಮತಗಳ್ಳತನ ಆಗಿರುವುದು ಬಹಿರಂಗಗೊಳಿಸಿದ್ದಾರೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ ಹೇಳಿದರು.

ಮುಖಂಡರಾದ ಇಕ್ಬಾಲ್‌ ಅಹ್ಮದ್‌, ಗೀತಾ ರಾಜಣ್ಣ, ಮಹೇಶ್, ಫಯಾಜ್, ಷಣ್ಮುಖಪ್ಪ, ಅಸ್ಲಾಂಪಾಷ, ಸುಜಾತಾ, ವಸುಂದರ, ಕವಿತಾ, ನಾಗಮಣಿ, ಮಾರುತಿ, ಕೆಂಪರಾಜು, ಕೊಡಿಯಾಲ ಮಹದೇವ್, ಸೌಭಾಗ್ಯ, ಲೋಕೇಶ್ ಸ್ವಾಮಿ, ಪಿ.ಶಿವಾಜಿ, ರೇವಣಸಿದ್ದಯ್ಯ, ಫರ್ಹಾನಾ ಬೇಗಂ, ಮಂಗಳಾ, ವಿಜಯಲಕ್ಷ್ಮಿ, ಪ್ರೇಮಾ, ಯಶೋದ, ಸಾಹೇರಾ ಮೊದಲಾದವರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.