ADVERTISEMENT

ರಂಗನಗುಡ್ಡಕ್ಕೆ ಬೆಂಕಿ: ನಂದಿಸಲು ಹರಸಾಹಸ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 17:22 IST
Last Updated 29 ಮಾರ್ಚ್ 2020, 17:22 IST
ಹುಳಿಯಾರು ಸಮೀಪದ ರಂಗನಗುಡ್ಡಕ್ಕೆ ಹೊತ್ತಿದ್ದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಹುಳಿಯಾರು ಸಮೀಪದ ರಂಗನಗುಡ್ಡಕ್ಕೆ ಹೊತ್ತಿದ್ದ ಬೆಂಕಿ ನಂದಿಸಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ   

ಹುಳಿಯಾರು: ಹೋಬಳಿಯ ರಂಗನಕೆರೆ ಹಾಗೂ ನುಲೇನೂರು ಗ್ರಾಮಗಳಿಗೆ ಹೊಂದಿಕೊಂಡಿರುವ ರಂಗನಗುಡ್ಡಕ್ಕೆ ಭಾನುವಾರ ಮಧ್ಯಾಹ್ನ ಬೆಂಕಿ ಬಿದ್ದು ಹೊತ್ತಿ ಉರಿಯಿತು. ಅರಣ್ಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.

ರಂಗನಗುಡ್ಡದ ನುಲೇನೂರು ಗ್ರಾಮದ ಭಾಗದಿಂದ ಒಮ್ಮೆಲೆ ಬೆಂಕಿ ಹೊತ್ತಿ ಉರಿಯಲು ಆರಂಭವಾಯಿತು. ಮಧ್ಯಾಹ್ನದ ಬಿಸಿಲು ಹೆಚ್ಚಾಗಿದ್ದು, ಒಣಗಿದ ಗುಡಮರಗಳಿಗೆ ಬೆಂಕಿ ಹೊತ್ತಿತು. ಕ್ಷಣ ಮಾತ್ರದಲ್ಲಿ ಗುಡ್ಡಕ್ಕೆ ವ್ಯಾಪಿಸಿತು. ಬೆಂಕಿ ಬಿದ್ದಿರುವ ಸುಳಿವು ಅರಿತು ಬುಕ್ಕಾಪಟ್ಟಣ ಅರಣ್ಯ ವಲಯದ ಸಿಬ್ಬಂದಿ ತಕ್ಷಣವೇ ಬೆಂಕಿ ನಂದಿಸಲು ಬಂದರು.

ಆದರೆ, ಬೆಂಕಿಯ ಕೆನ್ನಾಲಿಗೆ ಗುಡ್ಡವನ್ನು ವ್ಯಾಪಿಸಿ ಹೊಂದಿಕೊಂಡಿರುವ ಚಿಕ್ಕರಂಗನ ಗುಡ್ಡವನ್ನು ವ್ಯಾಪಿಸಿತು. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟು ಗುಡ್ಡ ಸಂಪೂರ್ಣ ಹೊತ್ತಿ ಉರಿಯುವುದನ್ನು ತಪ್ಪಿಸಿದರು. ಈ ಭಾಗದಲ್ಲಿ ಗುಡ್ಡಗಳಿಗೆ ಪದೇ ಪದೇ ಬೆಂಕಿ ಬೀಳುತ್ತಿದ್ದು, ಬೆಂಕಿ ಇಡುವವರನ್ನು ಹಿಡಿದು ಶಿಸ್ತುಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.