ADVERTISEMENT

ತುಮಕೂರು: ಪರಸ್ಪರ ವಿವಾಹಕ್ಕೆ ಮುಂದಾದ ಯುವತಿಯರು!

ಮನವೊಲಿಸಿ ಮನೆಗೆ ಕರೆದೊಯ್ದ ಪೋಷಕರು

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:58 IST
Last Updated 13 ಮೇ 2022, 2:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರು ವಿವಾಹವಾಗಲು ಅವಕಾಶ ಮಾಡಿಕೊಡುವಂತೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಆದರೆ, ಪೊಲೀಸರು ಅದಕ್ಕೆ ಅವಕಾಶ ಮಾಡಿಕೊಡದ ಕಾರಣ ಪೋಷಕರು ಯುವತಿಯರ ಮನವೊಲಿಸಿ ಮನೆಗೆ ಕರೆದೊಯ್ದಿದ್ದಾರೆ.

ನಗರದಡಿಪ್ಲೊಮಾ ಕಾಲೇಜೊಂದರಲ್ಲಿ ಓದುತ್ತಿದ್ದ 22 ವರ್ಷ ಹಾಗೂ 19 ವರ್ಷದ ಯುವತಿಯರಿಬ್ಬರೂ ಸಹಪಾಠಿಗಳು. ಕಾಲೇಜಿ
ನಲ್ಲಿ ಕಲಿಯುವಾಗಲೇ ಇಬ್ಬರ ಮಧ್ಯೆ ಪ್ರೀತಿ ಮೊಳಕೆಯೊಡೆದಿತ್ತು. ವಿವಾಹವಾಗಲು ಆಗಲೇ ಇಬ್ಬರೂ ನಿರ್ಧರಿಸಿದ್ದರು.

ಯುವತಿಯರಿಬ್ಬರೂ ಒಂದೇ ಸಮುದಾಯಕ್ಕೆ ಸೇರಿದ್ದು, ಮದುವೆಯಾಗಲು ಯುವತಿಯರ ಮನೆಯವರೂ ಒಪ್ಪದ ಕಾರಣ, ಅವರು ನಗರದ ತಿಲಕ್‌ ಪಾರ್ಕ್ ಪೊಲೀಸರ ಮೊರೆ ಹೋಗಿದ್ದರು. ಅವರ ಬೇಡಿಕೆಗೆ ಪೊಲೀಸರು ಸ್ಪಂದಿಸದಿದ್ದಾಗ ಇಬ್ಬರೂ ನಗರದಿಂದ ಪರಾರಿಯಾಗಿದ್ದರು. ಗುರುವಾರ ನಗರಕ್ಕೆ ವಾಪಸ್ ಬಂದಿದ್ದು, ಮದುವೆ ಸಿದ್ಧತೆಯಲ್ಲಿ ತೊಡಗಿದ್ದರು. ಈ ವಿಚಾರ ತಿಳಿದ ಇಬ್ಬರು ಯುವತಿಯರ ಪೋಷಕರು ಪೊಲೀಸ್ ಠಾಣೆಗೆ ಬಂದಿದ್ದಾರೆ. ಯುವತಿಯರ ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.