ADVERTISEMENT

ತುಮಕೂರು: ನಿರ್ಮಿತಿ ಕೇಂದ್ರದ ಅಧಿಕಾರಿ ರಾಜಶೇಖರ್ ಮನೆ ಮೇಲೆ ಲೋಕಾ ದಾಳಿ

​ಪ್ರಜಾವಾಣಿ ವಾರ್ತೆ
Published 15 ಮೇ 2025, 5:06 IST
Last Updated 15 ಮೇ 2025, 5:06 IST
<div class="paragraphs"><p>ನಿರ್ಮಿತಿ ಕೇಂದ್ರದ ಯೋಜ‌ನಾ ನಿರ್ದೇಶಕ ರಾಜಶೇಖರ್</p></div>

ನಿರ್ಮಿತಿ ಕೇಂದ್ರದ ಯೋಜ‌ನಾ ನಿರ್ದೇಶಕ ರಾಜಶೇಖರ್

   

ತುಮಕೂರು: ನಿರ್ಮಿತಿ ಕೇಂದ್ರದ ಯೋಜ‌ನಾ ನಿರ್ದೇಶಕ ರಾಜಶೇಖರ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ನಗರದ ಅಶೋಕ ನಗರದ 4ನೇ ಅಡ್ಡರಸ್ತೆಯಲ್ಲಿರುವ ರಾಜಶೇಖರ್ ಮನೆ, ಎಸ್.ಎಸ್.ಪುರಂನ ಅವರ ಸಹೋದರನ ಮನೆ ಸೇರಿದಂತೆ ಒಟ್ಟು ‌3 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ಲೋಕಾಯುಕ್ತ ಎಸ್.ಪಿ ಲಕ್ಷ್ಮಿನಾರಾಯಣ್ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.