ತುಮಕೂರು: ತಾಲ್ಲೂಕಿನ ಕಾಳೇನಹಳ್ಳಿಯಲ್ಲಿ ಈಚೆಗೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದ ದ್ವಿದಳ ಧಾನ್ಯ ಬೇಳೆ ಸಂಸ್ಕರಣಾ ಘಟಕದ ಸ್ಥಾಪನೆ ಮತ್ತು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಮೂಡಲಗಿರಿಯಪ್ಪ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿದರು. ಬೇಳೆ ಸಂಸ್ಕರಣೆ ಕುರಿತು ಪೂರ್ವ ಭಾವಿಯಾಗಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರು, ಮಹಿಳಾ ಸ್ವಸಹಾಯ ಗುಂಪು, ಯುವ ಜನರಿಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು.
ವಿಜ್ಞಾನಿ ಎಚ್.ಎಸ್.ಲತಾ, ‘ಸ್ಥಳೀಯವಾಗಿ ಉದ್ಯಮ ಆರಂಭಿಸಲು ಇದು ಸುವರ್ಣಾವಕಾಶ. ಗ್ರಾಮೀಣ ಭಾಗದ ಆರ್ಥಿಕತೆಗೆ ಬಲ ನೀಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ರೈತರು ಸಂಸ್ಕರಣಾ ಘಟಕ ಅಳವಡಿಸಿಕೊಂಡು ಬೇಳೆ ಶುದ್ಧೀಕರಣ, ವಿಭಜನೆ ಮತ್ತು ಪ್ಯಾಕೇಜ್ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡಬಹುದು’ ಎಂದು ತಿಳಿಸಿದರು.
ಜಿಕೆವಿಕೆ ಮಣ್ಣು ವಿಜ್ಞಾನಿ ಬಿ.ಜಿ.ವಾಸಂತಿ, ತಾಂತ್ರಿಕ ಸಹಾಯಕ ಜಾಧವ್ ಬಾಲಾಜಿ ಅಮೃತ್‌ರಾವ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.