ADVERTISEMENT

ಶಿರಾ: ಗೋಡೆ ಕುಸಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 8:31 IST
Last Updated 23 ಆಗಸ್ಟ್ 2021, 8:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿರಾ: ತಾಲ್ಲೂಕಿನ ಯರವರಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಗೋಡೆ ಕುಸಿದು ಮಹಿಳೆ ಮೃತಪಟ್ಟಿದ್ದಾರೆ.

ಯರವರಹಳ್ಳಿ ಗ್ರಾಮದ ಮೋಹನಕೃಷ್ಣ ಎಂಬುವರ ಮನೆ ಕುಸಿದು ಬಿದ್ದು ಅದೇ ಗ್ರಾಮದ ರತ್ನಮ್ಮ ಮೃತ ಪಟ್ಟಿದ್ದಾರೆ.

ರತ್ನಮ್ಮ ತನ್ನ ಜಮೀನಿನಲ್ಲಿ ಕೆಲಸ ಮಾಡಿಸಲು ಕೂಲಿ ಆಳುಗಳನ್ನು ಕರೆದುಕೊಂಡು ಬರಲು ಹೋಗಿದ್ದ ಸಮಯದಲ್ಲಿ ಮೋಹನ ಕೃಷ್ಣ ಅವರು ಚಹಾ ಕುಡಿದು ಹೋಗಲು ರತ್ನಮ್ಮ ಅವರನ್ನು ಕರೆದಿದ್ದಾರೆ.

ADVERTISEMENT

ಮೋಹನಕೃಷ್ಣ ಅವರ ಮನೆಯಲ್ಲಿ ರತ್ನಮ್ಮ ಚಹಾ ಕುಡಿಯುತ್ತಿದ್ದ ಸಮಯದಲ್ಲಿ ಗೋಡೆ ಕುಸಿದು ಬಿದ್ದಿದೆ. ಮಣ್ಣಿನ ಅಡಿಯಲ್ಲಿ ಸಿಲುಕಿದ ರತ್ನಮ್ಮ ಅವರನ್ನು ಮಣ್ಣಿನಿಂದ ಹೊರತೆಗೆದು ತಾವರೆಕೆರೆ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದ ಜಯಮ್ಮ, ವೆಂಕಟೇಶ್ ಅವರಿಗೆ ಚಿಕಿತ್ಸೆ ನೀಡಲಾಗಿದೆ.

ಕಳೆದ ಎರಡು ದಿನಗಳಿಂದ ಬರುತ್ತಿರುವ ಮಳೆಯಿಂದ ಹಳೆಯ ಮನೆಯ ಗೋಡೆ ನೆನೆದು ಕುಸಿದು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.