ಪ್ರಜಾವಾಣಿ ವಾರ್ತೆ
ತುಮಕೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆ. 15ರಂದು ಮಧ್ಯಾಹ್ನ 3 ಗಂಟೆಗೆ ನಗರದಲ್ಲಿ ವೈಭವದ ತಿರಂಗಾ ಯಾತ್ರೆ ನಡೆಯಲಿದೆ.
‘ಮಹಾನಗರ ಪಾಲಿಕೆ ಆವರಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದ ನಂತರ ಯಾತ್ರೆ ಪ್ರಾರಂಭಿಸಲಾಗುವುದು. ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಗುಂಚಿ ಚೌಕ ವೃತ್ತ ಮೂಲಕ ಸ್ವತಂತ್ರ ಚೌಕದ ವರೆಗೆ ಸಾಗಲಿದೆ’ ಎಂದು ತಿರಂಗ ಯಾತ್ರೆ ಸಮಿತಿ ಸಂಚಾಲಕ ಜಿ.ಆರ್.ಸುರೇಶ್ ಇಲ್ಲಿ ಬುಧವಾರ ಹೇಳಿದರು.
ಮಠಾಧೀಶರು, ಸಂಘ–ಸಂಸ್ಥೆ, ನಿವೃತ್ತ ಸೈನಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಎಲ್ಲ ಸಮುದಾಯಗಳ ಮುಖಂಡರು, ಕೈಗಾರಿಕೋದ್ಯಮಿಗಳು, ವಕೀಲರು, ವೈದ್ಯರು, ವರ್ತಕರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ‘ವಿವಿಧ ಕಲಾ ತಂಡಗಳ ಆಕರ್ಷಕ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದೆ. ಮನೆ ಮನೆಯಲ್ಲೂ ಸ್ವಾತಂತ್ರ್ಯೋತ್ಸವ ಸಂಭ್ರಮಿಸಬೇಕು. ಪ್ರತಿಯೊಬ್ಬರೂ ತಮ್ಮ ಮನೆ, ಕಚೇರಿ ಮೇಲೆ ಆ. 15ರ ಸಂಜೆ 6 ಗಂಟೆಯ ವರೆಗೆ ರಾಷ್ಟ್ರ ಧ್ವಜ ಹಾರಿಸಬೇಕು’ ಎಂದರು.
ಮುಖಂಡರಾದ ವೈ.ಎಚ್.ಹುಚ್ಚಯ್ಯ, ಕೆ.ಜೆ.ರುದ್ರಪ್ಪ, ಆರ್.ಎ.ಸುರೇಶ್‍ಕುಮಾರ್, ಡಾ.ಕೆ.ಪಿ.ಸುರೇಶ್‍ಬಾಬು, ಪಿ.ಎನ್.ರಾಮಯ್ಯ, ಕೆ.ಧನುಷ್, ಎಚ್.ಜಿ.ಸದಾಶಿವಯ್ಯ, ಸುರೇಶ್ ರಾವ್, ಕೇಶವಮೂರ್ತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.