ADVERTISEMENT

ತುರುವೇಕೆರೆ: ಸಂಪಿಗೆ ಶ್ರೀನಿವಾಸ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಮೇ 2025, 13:35 IST
Last Updated 10 ಮೇ 2025, 13:35 IST
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಶ್ರೀನಿವಾಸ ರಥೋತ್ಸವ ಶನಿವಾರ ನೆರವೇರಿತು
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಶ್ರೀನಿವಾಸ ರಥೋತ್ಸವ ಶನಿವಾರ ನೆರವೇರಿತು   

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಶ್ರೀನಿವಾಸ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ದೇವಾಲಯವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಮೂರ್ತಿಯನ್ನು ಬಗೆಬಗೆಯ ಹೂ ಮತ್ತು ಹೂಮಾಲೆಗಳಿಂದ ಅಲಂಕರಿಸಿದ್ದರು. ಇದಕ್ಕೂ ಮೊದಲು ದೇವರನ್ನು ಪಂಚಾಭಿಷೇಕ ಮಾಡಿ ಪ್ರಮುಖ ಬೀದಿಗಳಲ್ಲಿ ದೂಳು ಮೆರವಣಿಗೆ ಉತ್ಸವ ನಡೆಸಿದರು.

ಅಲಂಕಾರಗೊಂಡಿದ್ದ ರಥಕ್ಕೆ ಮೂರ್ತಿಯನ್ನು ಕೂರಿಸಿ ಅದರ ಚಕ್ರಕ್ಕೆ ಅನ್ನಸಂತರ್ಪಣೆ ಪೂಜೆ ಸಲ್ಲಿಸಿದರು. ನಂತರ ಭಕ್ತಾದಿಗಳು ರಥ ಎಳೆದರು. ಹರಕೆ ಹೊತ್ತ ಭಕ್ತರು ಬಾಳೆಹಣ್ಣು ಮತ್ತು ಧವನ ರಥಕ್ಕೆ ತೂರಿದರು.

ADVERTISEMENT

ಶ್ರೀಧರ್, ಯೋಗೀಶ್, ಸತೀಶ್, ಉಮೇಶ್, ಎಸ್.ಎನ್.ಯೋಗೀಶ್, ಎಸ್.ಆರ್.ವಿಜಯಕುಮಾರ್, ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.