ADVERTISEMENT

ಇಬ್ಬರು ಅಪರಿಚಿತ ಮಹಿಳೆಯರ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 4:26 IST
Last Updated 1 ಅಕ್ಟೋಬರ್ 2021, 4:26 IST

ತಿಪಟೂರು: ತಾಲ್ಲೂಕಿನ ಈಚನೂರು ಕೆರೆಯಲ್ಲಿ ಸುಮಾರು 50ರಿಂದ 60 ವರ್ಷ ವಯಸ್ಸಿನ ಇಬ್ಬರು ಅಪರಿಚಿತಹೆಂಗಸರ ಶವ ಪತ್ತೆಯಾಗಿದ್ದು, ಪೊಲೀಸರಿಗೆ ಸ್ಥಳೀಯರು ಮಾಹಿತಿ
ನೀಡಿದ್ದಾರೆ.

ಎರಡು ಮೃತ ದೇಹಗಳನ್ನು ಹೊರ ತೆಗೆದಿದ್ದು ಕಳೆದ 4 ದಿನಗಳ ಹಿಂದೆಯೇ ನೀರಿಗೆ ಬಿದ್ದಿರುವ ಶಂಕೆಯಿದೆ.

ಒಬ್ಬ ಹೆಂಗಸು ಸೀರೆಯುಟ್ಟಿದ್ದು, ಮತ್ತೊಬ್ಬರು ನೈಟಿ ಹಾಕಿಕೊಂಡಿದ್ದಾರೆ. ಮೃತರ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ.

ADVERTISEMENT

ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕಾರ್ಯ
ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.