ADVERTISEMENT

ಗ್ರಂಥಾಲಯ ಸಪ್ತಾಹ: ಹರ್ಷಿತಾ, ಚಿನ್ಮಯ್‌ ಪ್ರಥಮ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 8:32 IST
Last Updated 18 ನವೆಂಬರ್ 2025, 8:32 IST
   

ತುಮಕೂರು: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಎಂಪ್ರೆಸ್‌ ಶಾಲೆಯ ಹರ್ಷಿತಾ ಪ್ರಥಮ ಸ್ಥಾನ ಪಡೆದರು. ಗ್ರಂಥಾಲಯ ಇಲಾಖೆಯಿಂದ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು.

ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರು.

ಪ್ರಬಂಧ ಸ್ಪರ್ಧೆ– ಹರ್ಷಿತಾ (ಎಂಪ್ರೆಸ್‌), ಕೆ.ಎನ್‌.ಕಲ್ಯಾಣ್‌ಕುಮಾರ್‌ (ಬಾಪೂಜಿ ಪ್ರೌಢಶಾಲೆ), ಮನುಶ್ರೀ (ಎಂಪ್ರೆಸ್‌). ರಸಪ್ರಶ್ನೆ– ಚಿನ್ಮಯ್‌ (ಬಾಪೂಜಿ), ವಿಕಾಸ್‌ (ಬಾಪೂಜಿ), ಎಸ್‌.ಜಯಶ್ರೀ (ಎಂಪ್ರೆಸ್‌). ಮೆಮೊರಿ ಟೆಸ್ಟ್‌– ಭರತ್‌ (ಚೇತನಾ ವಿದ್ಯಾಮಂದಿರ), ಆರ್‌.ಲೋಕೇಶ್‌ (ಚೇತನಾ), ಸನ್ಮಿತ್‌ (ಚೇತನಾ).

ADVERTISEMENT

ಚಿತ್ರಕಲೆ– ಹರ್ಷಿತಾ (ಎಂಪ್ರೆಸ್‌), ಎಸ್‌.ಎಚ್‌.ಮೋಕ್ಷಾ (ಚೇತನಾ), ಜೆ.ನಿಧಿ (ಚೇತನಾ). ರಂಗೋಲಿ– ಮಂಗಳಾ (ಬಾಪೂಜಿ), ವಿ.ಗಾನವಿ (ಎಂಪ್ರೆಸ್‌), ವೈ.ಎ.ವರ್ಷಿಣಿ (ಬಾಪೂಜಿ).

ಬಹುಮಾನ ವಿತರಣೆ: ನಗರದಲ್ಲಿ ಸೋಮವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಕೇಂದ್ರ ಗ್ರಂಥಾಲಯ, ಇನ್ನರ್‌ ವ್ಹೀಲ್‌ ಸಂಸ್ಥೆ, ಗ್ರಂಥಾಲಯ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಗ್ರಂಥಾಲಯ ಸಂಘದ ಅಧ್ಯಕ್ಷ ಶಿವಶಂಕರ ಕಾಡದೇವರಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ರಾಜ್ಯದಾದ್ಯಂತ ‘ಓದು ಕರ್ನಾಟಕ’ ಆಂದೋಲನ ನಡೆಸಲಾಗುತ್ತಿದೆ. ಡಿ. 18ರಂದು ನಗರದಲ್ಲಿ ಚಾಲನೆ ನೀಡಲಾಗುತ್ತದೆ. ಪಾಲಿಕೆ ವ್ಯಾಪ್ತಿಯ 35 ಸರ್ಕಾರಿ ಶಾಲೆ ಆಯ್ಕೆ ಮಾಡಿ, ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಲಾಗುವುದು’ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ದಿವಾಕರ್‌, ‘ನಗರದ ಗ್ರಂಥಾಲಯದಲ್ಲಿ ನಿತ್ಯ ಸುಮಾರು 800 ಮಂದಿ ನಿಯಮಿತ ಓದುಗರಾಗಿದ್ದಾರೆ. ಇಲ್ಲಿ ಅಭ್ಯಾಸ ನಡೆಸಿದ ಹಲವರು ಸರ್ಕಾರಿ ಉದ್ಯೋಗ ಪಡೆದಿದ್ದಾರೆ’ ಎಂದರು.

ವಿ.ವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ರೂಪೇಶ್‍ಕುಮಾರ್‌, ಸಿ.ವಿ.ರಾಮನ್‌ ಸಂಶೋಧನಾ ಕೇಂದ್ರದ ಗ್ರಂಥಾಲಯ ಮುಖ್ಯಸ್ಥ ನಾಗರಾಜು, ಇನ್ನರ್ ವ್ಹೀಲ್‌ ಸಂಸ್ಥೆ ಅಧ್ಯಕ್ಷೆ ಮಂಜುಳಾ ಲೋಕೇಶ್‌, ಕಾರ್ಯದರ್ಶಿ ಸುಮಿತ್ರಾ ನಾಗರಾಜು, ಗ್ರಂಥಪಾಲಕರಾದ ಬಸವರಾಜು, ಬಿ.ಎಸ್.ವಿಜಯಕುಮಾರ್‌ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.