ADVERTISEMENT

ಮಧುಗಿರಿಯಲ್ಲಿ ಶಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 3:44 IST
Last Updated 27 ಅಕ್ಟೋಬರ್ 2020, 3:44 IST
ಮಧುಗಿರಿಯಲ್ಲಿ ಸೋಮವಾರ ವಿಜಯ ದಶಮಿ ಹಬ್ಬದ ಅಂಗವಾಗಿ ತಹಶೀಲ್ದಾರ್ ಡಾ. ಜಿ.ವಿಶ್ವನಾಥ್ ಅವರು ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿದರು.
ಮಧುಗಿರಿಯಲ್ಲಿ ಸೋಮವಾರ ವಿಜಯ ದಶಮಿ ಹಬ್ಬದ ಅಂಗವಾಗಿ ತಹಶೀಲ್ದಾರ್ ಡಾ. ಜಿ.ವಿಶ್ವನಾಥ್ ಅವರು ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿದರು.   

ಮಧುಗಿರಿ: ವಿಜಯ ದಶಮಿ ಹಬ್ಬದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ದೇವಾಲಯದ ಉತ್ಸವ ಮೂರ್ತಿಗಳನ್ನು ಮೆರವಣಿಗೆ ನಡೆಸಲಾಯಿತು.

ಪಟ್ಟಣದ ಕೆ.ಆರ್.ಬಡಾವಣೆಯ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ವೆಂಕಟರಮಣ ,ಮಲ್ಲೇಶ್ವರ ಸ್ವಾಮಿ ,ಕಲ್ಯಾಣ ಆಂಜನೇಯ ಸ್ವಾಮಿ ಹಾಗೂ ವೀರಾಂಜನೇಯ ಸ್ವಾಮಿಯ ಉತ್ಸವ ಮೂರ್ತಿಯನ್ನು ಕರೆತಂದು ಪೂಜಾ ನೆಡಸಲಾಯಿತು. ನಿರ್ಮಿಸಲಾಗಿದ್ದ ಬನ್ನಿ ಮಂಟಪ ಹಾಗೂ ಶಮಿ ಪೂಜಾ ಕಾರ್ಯಕ್ರಮವನ್ನು ತಹಶೀಲ್ದಾರ್ ಡಾ.ಜಿ.ವಿಶ್ವನಾಥ್ ನಡೆಸಿದರು.

ಶಮಿ ಪೂಜಾ ಕಾರ್ಯಕ್ರಮವನ್ನು ವೀಕ್ಷಿಸಲು ಜನರು ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.

ADVERTISEMENT

ಕಂದಾಯ ನಿರೀಕ್ಷಕ ಸಿದ್ದರಾಜು, ಧಾರ್ಮಿಕ ಮುಖಂಡ ಡಾ.ಎಂ.ಜಿ.ಶ್ರೀನಿವಾಸ ಮೂರ್ತಿ , ಪುರಸಭೆ ಮಾಜಿ ಅಧ್ಯಕ್ಷ ಕೆ. ಪ್ರಕಾಶ್,ಎಂ.ವಿ.ಗೋವಿಂದರಾಜು , ಮಾಜಿ ಸದಸ್ಯರಾದ ಆರ್.ಎಲ್.ಎಸ್ ರಮೇಶ್ ,ಉಮೇಶ್ , ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ , ಮುಖಂಡರಾದ ನಂಜುಂಡಯ್ಯ , ಯತೀಶಬಾಬು , ಮೋಹನ್ ಹಾಗೂ ಅರ್ಚಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.