ADVERTISEMENT

ಪೋಲೇನಹಳ್ಳಿ: ಚರಂಡಿ ಇಲ್ಲದೆ ರಸ್ತೆಗೆ ಹರಿಯುವ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 14:41 IST
Last Updated 2 ಫೆಬ್ರುವರಿ 2025, 14:41 IST
ಪಾವಗಡ ತಾಲ್ಲೂಕು ಸಾಸಲಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಲೇನಹಳ್ಳಿ ಎಸ್‌ಸಿ ಕಾಲೊನಿಯಲ್ಲಿ  ಕೊಳಚೆ ನೀರು ನಿಂತಿದೆ
ಪಾವಗಡ ತಾಲ್ಲೂಕು ಸಾಸಲಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಲೇನಹಳ್ಳಿ ಎಸ್‌ಸಿ ಕಾಲೊನಿಯಲ್ಲಿ  ಕೊಳಚೆ ನೀರು ನಿಂತಿದೆ   

ಪಾವಗಡ: ತಾಲ್ಲೂಕಿನ ಸಾಸಲಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಲೇನಹಳ್ಳಿ ಕಾಲೊನಿಯಲ್ಲಿ ಚರಂಡಿ, ಸಿ.ಸಿ. ರಸ್ತೆ ಇಲ್ಲದೆ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಚರಂಡಿ ಇಲ್ಲದೆ ಕೊಳಚೆ ನೀರು ರಸ್ತೆಗೆ ಹರಿಸಬೇಕಿದೆ. ಇದರಿಂದ ಸದಾ ವಾಸನೆಯಲ್ಲಿಯೇ ದಿನ ದೂಡಬೇಕಿದೆ. ಸೊಳ್ಳೆ, ಹಂದಿಗಳ ಹಾವಳಿ ಹೆಚ್ಚಿದೆ. ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಭೀತಿಯಲ್ಲಿದ್ದಾರೆ ಎಂದು ಕಾಲೊನಿ ಜನತೆ ಆರೋಪಿಸಿದ್ದಾರೆ.

ಭಜನಾ ಮಂಡಳಿ ಬಳಿಯ ನೀರಿನ ಟ್ಯಾಂಕ್ ತೆರವುಗೊಳಿಸಬೇಕಿದೆ. ಗ್ರಾಮದ ಕಾಲೊನಿಗೆ ಸಮರ್ಪಕ ರಸ್ತೆ ಇಲ್ಲ. ಮಳೆಗಾಲದಲ್ಲಿ ಓಡಾಡಲೂ ಸಾಧ್ಯವಾಗದ ಸ್ಥಿತಿ ಇರುತ್ತದೆ ಎಂದು ದೂರಿದ್ದಾರೆ.

ADVERTISEMENT

ಸಮಸ್ಯೆಗಳ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಸಮಸ್ಯೆ ಬಗೆಹರಿಸದಿದ್ದಲ್ಲಿ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ಕಾಲೊನಿ ನಿವಾಸಿಗಳು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.