ತುಮಕೂರು: ಗುಬ್ಬಿ ತಾಲ್ಲೂಕು ಮಣಿಕುಪ್ಪೆಯಲ್ಲಿ ಚಿರತೆ ದಾಳಿಗೆ ಭಾಗ್ಯಮ್ಮ (30) ಎಂಬುವವರು ಬಲಿಯಾಗಿದ್ದಾರೆ.
ಹಸು ಮೇಯಿಸಲು ತೆರಳಿದ್ದಾಗ ಮಹಿಳೆಯ ಮೇಲೆ ಚಿರತೆ ದಾಳಿ ಮಾಡಿದೆ. 2020ರ ಜನವರಿಯಲ್ಲಿ ಇದೇ ಗ್ರಾಮದಲ್ಲಿ ನಡೆದ ಚಿರತೆ ದಾಳಿಗೆ ಸಮರ್ಥ್ ಗೌಡ (4) ಬಲಿಯಾಗಿದ್ದ. ಗುಬ್ಬಿ, ತುಮಕೂರು ಮತ್ತು ಕುಣಿಗಲ್ ತಾಲ್ಲೂಕು ಗಡಿ ಪ್ರದೇಶವಾದ ಇಲ್ಲಿ ಚಿರತೆ ಹಾವಳಿ ಹೆಚ್ಚಿದೆ.
ಈ ಭಾಗದಲ್ಲಿ ಚಿರತೆ ದಾಳಿಯಿಂದಾಗುತ್ತಿರುವ ಪ್ರಾಣಹಾನಿ ತಪ್ಪಿಸಿ, ಮನುಷ್ಯ ಮತ್ತು ಸಾಕು ಪ್ರಾಣಿಗಳನ್ನು ರಕ್ಷಿಸಲು ‘ಆಪರೇಷನ್ ಸಮರ್ಥ್’ ಕಾರ್ಯಾಚರಣೆಯನ್ನು ಸಹ ನಡೆಸಲಾಗಿತ್ತು. ಈ ವ್ಯಾಪ್ತಿಯಲ್ಲಿಯೇ 10ಕ್ಕೂ ಹೆಚ್ಚು ಚಿರತೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.