
ಮಧುಗಿರಿ: ಸುಪ್ರೀಂ ಕೋರ್ಟ್‌ನಲ್ಲಿ ಗ್ರೀನ್ ಸಿಗ್ನಲ್ ದೊರೆತರೆ ಮಳೆಗಾಲಕ್ಕೆ ಮಧುಗಿರಿಗೆ ಎತ್ತಿನಹೊಳೆ ನೀರು ಬರುವ ನಿರೀಕ್ಷೆ ಇದೆ. ತಾಲ್ಲೂಕಿನಲ್ಲಿ ಎತ್ತಿನಹೊಳೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯಿಂದ ಒಂದಷ್ಟು ಸಮಸ್ಯೆಯಾಗಿರುವುದರಿಂದ ನೀರು ಬರುವುದಕ್ಕೆ ಹಿನ್ನಡೆಯಾಗಿದೆ ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ಪಟ್ಟಣದ ರಾಜೀವಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಸುಮಾರು 40 ಸೆಟ್ ಮೋಟರ್-ಪಂಪ್ ಪರಿಕರಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
‘ಹಿಂದೆ ಕ್ರಿಟಿಕಲ್ ಇದ್ದಂತಹ ಸಕಲೇಶಪುರದಲ್ಲಿ ಎಂಟು ವೇರ್‌ಗಳಲ್ಲೂ ನೀರನ್ನು ಪಂಪ್ ಮಾಡುವಂತಹ ಕೆಲಸ ಮಾಡಿಸಿದ್ದೆ. ನಮಗೆ ಒಂದು ದುರ್ದೈವವೆಂದರೆ ಈ ಕಡೆ ಲೈನ್ ಸರಿಯಾಗಿ ಕ್ಲಿಯರ್ ಆಗದ ಕಾರಣ ಅಲ್ಲಿನ ನೀರನ್ನು ನಾವು ವಾಣಿವಿಲಾಸ ಡ್ಯಾಂಗೆ ಬಿಡುತ್ತಿದ್ದೇವೆ. ಅಲ್ಲಿಂದ ನೀರು ಸರಾಗವಾಗಿ ಕೆರೆಗಳಿಗೆ ಹರಿಸಲು ಕೆಲಸವನ್ನು ತಾಲ್ಲೂಕಿನಲ್ಲಿ ಈಗಾಗಲೇ ₹300 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಸುಪ್ರೀಂಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ದೊರೆತರೆ ಕೆರೆಗಳಿಗೆ ಮಳೆಗಾಲದ ವೇಳೆಗೆ ನೀರು ಹರಿಯುವ ನಿರೀಕ್ಷೆಯಿದೆ’ ಎಂದರು.
ಸಣ್ಣ ನೀರಾವರಿ ಇಲಾಖೆ ಎಇಇ ತಿಪ್ಪೇಸ್ವಾಮಿ, ಎಂಜಿನಿಯರ್ ಮಂಜುಕಿರಣ್, ತಹಶೀಲ್ದಾರ್ ಶ್ರೀನಿವಾಸ್, ಎಒ ಲಕ್ಷ್ಮಣ್, ವಲಯ ಅರಣಾಧಿಕಾರಿ ಸುರೇಶ್, ಜಿ.ಜೆ.ರಾಜಣ್ಣ, ಮಲ್ಲಿಕಾರ್ಜುನ್, ನಾಗೇಶ್ ಬಾಬು, ಗಂಗಣ್ಣ, ಎಂ.ಪಿ. ಕಾಂತರಾಜು, ಸಿದ್ದಾಪುರ ರಂಗಸ್ವಾಮಿ, ರಾಜಶೇಖರ್ ರೆಡ್ಡಿ ಹಾಗೂ ರೈತರು ಹಾಜರಿದ್ದರು.
ಹಿಂದಿನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ₹5 ಸಾವಿರ ಕೋಟಿಯನ್ನೇ ಕೇಂದ್ರ ಸರ್ಕಾರ ನೀಡಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ಹೊಸದಾಗಿ ಕೊಡುತ್ತಾರೆ ಎಂಬ ವಿಶ್ವಾಸ ಇಲ್ಲ.ಕೆ.ಎನ್. ರಾಜಣ್ಣ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.