ತಿಪಟೂರು: ಊಹೆ ಮಾಡದ ವೇಗದಲ್ಲಿ ಬೆಳೆಯುತ್ತಿರುವ ಆಧುನಿಕ ಪ್ರಪಂಚದಲ್ಲಿ ಮಾನಸಿಕ ಸ್ಥಿರತೆ ಮತ್ತು ದೈಹಿಕ ಸದೃಢತೆ ಕಾಪಾಡಿಕೊಳ್ಳುವಲ್ಲಿ ಯೋಗವೇ ಪ್ರಬಲ ಅಸ್ತ್ರವಾಗಿದೆ ಎಂದು ಎಸ್.ವಿ.ಪಿ. ಕಾಲೇಜು ಪ್ರಾಂಶಪಾಲ ಕೆ.ಎನ್.ರೇಣುಕಯ್ಯ ತಿಳಿಸಿದರು.
ನಗರದ ಎಸ್‌ವಿಪಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಎನ್.ಎಸ್.ಎಂ. ಬಾಲಿಕಾ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಏರ್ಪಡಿಸಿಕೊಂಡಿದ್ದ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಯೋಗದಿಂದ ಮನಸ್ಸನ್ನು ಏಕಾಗ್ರತೆಯಲ್ಲಿ ಇಟ್ಟುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಧ್ಯಾನ, ಏಕಾಗ್ರತೆ, ಸತತ ಅಭ್ಯಾಸ, ಕ್ರಿಯಾಶೀಲತೆ, ಉತ್ಸಾಹ, ಕಲ್ಪನಾಶಕ್ತಿ ಮೈಗೂಡಿಸಿಕೊಂಡು ಆರೋಗ್ಯವೇ ಭಾಗ್ಯ ಎಂಬ ಪೂರ್ವಿಕರ ನುಡಿಗೆ ಅನ್ವರ್ಥರಾಗಬೇಕು ಎಂದರು.
ಬಿಆರ್‌ಸಿ ಕಚೇರಿ ಎಂ.ವಿ.ಮೋಹನ್, ದೈಹಿಕ ಶಿಕ್ಷಣ ಶಿಕ್ಷಕ ಬಿ.ಆರ್. ಉದಯಶಂಕರ ಮಾತನಾಡಿದರು. ವಿದ್ಯಾಪೀಠ ಮತ್ತು ಸುಮತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್.ಬಿ. ರೇಣು, ಶಿಕ್ಷಕ ವಿಜಯಕುಮಾರ್, ವಿಜಯಕುಮಾರಿ, ಬಿಂದು, ಹೇಮಲತಾ, ಉದಯಶಂಕರ್, ಸಿದ್ಧೇಶ್, ಸಂತೋಷ್, ಪಿ.ವೀರೇಶ್. ಜುಂಜಪ್ಪ, ಬಸವರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.